ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ 48 ವರ್ಷದ ತನ್ನ ಸ್ನೇಹಿತ ವೈದ್ಯಕೀಯ ನೆರವಿನ ದಯಾಮರಣಕ್ಕಾಗಿ ಸ್ವಿಟ್ಜರ್ಲೆಂಡ್ಗೆ ತೆರಳಲು ಮುಂದಾಗಿದ್ದು, ಆತನ ಪ್ರಯಾಣಕ್ಕೆ ತಡೆ ನೀಡಬೇಕು ಎಂದು ಕೋರಿ ಬೆಂಗಳೂರು ಮೂಲದ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

ವಕೀಲ ಸುಭಾಶ್ಚಂದ್ರನ್ ಕೆ.ಆರ್ ಅವರ ಮೂಲಕ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ.

‘ನನ್ನ ಸ್ನೇಹಿತ 2014ರಿಂದ ‘ದೀರ್ಘ ಕಾಲದ ಆಯಾಸ’ (ಕ್ರಾನಿಕ್ ಫೆಟಿಗ್ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ವಿಟ್ಜರ್ಲೆಂಡ್ಗೆ ತೆರಳಿ, ವೈದ್ಯಕೀಯ ನೆರವಿನೊಂದಿಗೆ ದಯಾಮರಣಕ್ಕೆ ಯೋಜಿಸಿದ್ದಾರೆ. ಒಂದು ವೇಳೆ ಅವರ ಪ್ರಯಾಣವನ್ನು ತಡೆಯದಿದ್ದರೆ, ಸ್ನೇಹಿತನ ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಲಿದೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದಿನ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ವಕೀಲ ಸುಭಾಶ್ಚಂದ್ರನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.