ಶಿವಾಜಿಗೆ ಕೋಶಿಯಾರಿ ಅವಮಾನ: ಬಿಜೆಪಿಗೆ ಈ ಬಗ್ಗೆ ಪ್ರತಿಕ್ರಿಯಿಸಲು ರಾವುತ್ ಆಗ್ರಹ

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಹೇಳಿಕೆಯನ್ನು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಖಂಡಿಸಿದ್ದಾರೆ.
ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಶಿವಾಜಿ ಮಹಾರಾಜರ ಚಿಂತನೆಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಮುಂದೆಯೂ ಅನುಸರಿಸಲಾಗುತ್ತದೆ. ಹೀಗಿರುವಾಗ ಶಿವಾಜಿ ಮಹಾರಾಜರು ಹಳೇ ಕಾಲದ ಐಕಾನ್ ಆಗುವುದು ಹೇಗೆ? ಎಂದು ರಾವುತ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿ ಪ್ರತಿಭಟಿಸುತ್ತಿರುವ ಬಿಜೆಪಿ ನಾಯಕರು ಕೋಶಿಯಾರಿ ಹೇಳಿಕೆಗೆ ಸಂಬಂಧಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ರಾವುತ್ ಆಗ್ರಹಿಸಿದ್ದಾರೆ.
ಭಗತ್‌ಸಿಂಗ್ ಕೋಶಿಯಾರಿ ಅವರು ಔರಂಗಬಾದ್‌ನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭ ಮಹಾರಾಷ್ಟ್ರದ ಐಕಾನ್‌ಗಳ ಕುರಿತು ಮಾತನಾಡಿದರು. ಈ ವೇಳೆ 'ಶಿವಾಜಿಯದ್ದು ಹಳೆಯ ಕಾಲದ ಮಾತಾಯಿತು. ಮಹಾರಾಷ್ಟ್ರದ ಐಕಾನ್‌ಗಳಿಗಾಗಿ ಹೊರಗೆ ಹುಡುಕಬೇಕೆಂದಿಲ್ಲ, ಇಲ್ಲೇ ಇದ್ದಾರೆ. ಬಿ.ಆರ್.ಅಂಬೇಡ್ಕರ್ ಅವರಿಂದ ನಿತಿನ್ ಗಡ್ಕರಿ ವರೆಗೆ ಐಕಾನ್‌ಗಳು ಇದ್ದಾರೆ' ಎಂದು ಹೇಳಿದ್ದರು.
ಶಿವಾಜಿ ಹಳೇ ಕಾಲದ ಐಕಾನ್: ಕೋಶಿಯಾರಿ ಹೇಳಿಕೆಗೆ ಗೋವಾ ಕಾಂಗ್ರೆಸ್ ಕಿಡಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.