ಮಂಗಳವಾರ, ಮಾರ್ಚ್ 21, 2023
28 °C
ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಮಟ್ಟಿಗೆ ಯಾತ್ರೆಯನ್ನು ರದ್ದು ಮ

Bharat Jodo Yatra | ಯಾತ್ರೆಯಲ್ಲಿ ಭದ್ರತಾ ಲೋಪ ಆಗೇ ಇಲ್ಲ ಎಂದ ಜಮ್ಮು ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಶ್ರೀನಗರ: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪವನ್ನು ಜಮ್ಮು ಕಾಶ್ಮೀರ ಪೊಲೀಸರು ನಿರಾಕರಿಸಿದ್ದಾರೆ.

‘ಯಾತ್ರೆಯಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ. ಶಾಂತಿಯುತವಾಗಿಯೇ ನಡೆದಿದೆ‘ ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಒಂದು ದಿನದ ಮಟ್ಟಿಗೆ ಯಾತ್ರೆಯನ್ನು ರದ್ದು ಮಾಡಿದೆ.

ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ‘ಒಂದು ಕಿ.ಮಿ ಬಳಿಕ ಯಾತ್ರೆ ರದ್ದು ಮಾಡುವ ನಿರ್ಧಾರದ ಬಗ್ಗೆ ಆಯೋಜಕರು ನಮಗೆ ತಿಳಿಸಿರಲಿಲ್ಲ. ಉಳಿದ ಯಾತ್ರೆ ಶಾಂತಿಯುತವಾಗಿತ್ತು. ಭದ್ರತಾ ಲೋಪ ನಡೆದೇ ಇಲ್ಲ. ನಾವು ಪೂರ್ಣ ಭದ್ರತೆ ನೀಡುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ತಪಾಸಣೆಗೆ ಒಳಗಾದ ಜನಸಮೂಹವನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಅನುಮತಿ ನೀಡಿದ್ದಾರೆ‘ ಎಂದು ಹೇಳಿದ್ದಾರೆ.

ಅಲ್ಲದೇ ಯಾತ್ರೆಯಲ್ಲಿ ದೊಡ್ಡ ಜನ ಸಮೂಹ ಸೇರುವ ಬಗ್ಗೆ ಆಯೋಜಕರಿಂದ ನಮಗೆ ಮಾಹಿತಿ ಬಂದಿರಲಿಲ್ಲ ಎಂದು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.

ಯಾತ್ರೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

‘ಸಂಬಂಧಪಟ್ಟ ಏಜೆನ್ಸಿಗಳಿಂದ ಭದ್ರತೆ ನಿರ್ವಹಣೆ ಸರಿಯಾಗಿರಲಿಲ್ಲ. 15 ನಿಮಿಷಗಳ ಕಾಲ ಯಾತ್ರೆಗೆ ಯಾವುದೇ ಭದ್ರತೆ ಇರಲಿಲ್ಲ. ಇದು ತೀವ್ರತರವಾದ ಭದ್ರತಾ ಲೋಪ. ರಾಹುಲ್‌ ಗಾಂಧಿ ಹಾಗೂ ಇತರೆ ಯಾತ್ರಿಗಳು ಭದ್ರತೆ ಇಲ್ಲದೆ ನಡೆಯಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್‌ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು