ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ನಿತೀಶ್‌ ಆಡಳಿತ ಅಂತ್ಯ?

ಬಿಹಾರ ವಿಧಾನಸಭೆ ಮತದಾನೋತ್ತರ ಸಮೀಕ್ಷೆ
Last Updated 7 ನವೆಂಬರ್ 2020, 19:39 IST
ಅಕ್ಷರ ಗಾತ್ರ
ADVERTISEMENT
""

ಪಟ್ನಾ: ‘ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಆಡಳಿತವು ಕೊನೆಯಾಗಲಿದೆ’ ಎಂದು ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆ ಫಲಿತಾಂಶಗಳು ಅಂದಾಜಿಸಿವೆ. ಶನಿವಾರ ಕೊನೆಯ ಹಂತದ ಮತದಾನ ಪೂರ್ಣಗೊಳ್ಳುತ್ತಿದ್ದಂತೆಯೇ ವಿವಿಧ ಸಂಸ್ಥೆಗಳ ವರು ತಾವು ನಡೆಸಿದ ಸಮೀಕ್ಷೆಗಳ ವರದಿಯನ್ನು ಬಹಿರಂಗಪಡಿಸಿದ್ದಾರೆ.

ತೇಜಸ್ವಿ ಯಾದವ್‌ ನೇತೃತ್ವದ ಮಹಾ ಘಟಬಂಧನವು ಕನಿಷ್ಠ 116ರಿಂದ ಗರಿಷ್ಠ 131ರಷ್ಟು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವಿವಿಧ ಸಮೀಕ್ಷೆಗಳು ಹೇಳಿವೆ. ಎನ್‌ಡಿಎಗೆ 91ರಿಂದ ಗರಿಷ್ಠ 128 ಸ್ಥಾನಗಳು ಹಾಗೂ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಗೆ 3ರಿಂದ 6 ಸ್ಥಾನಗಳು ಮಾತ್ರ ಲಭಿಸುವ ನಿರೀಕ್ಷೆ ವ್ಯಕ್ತವಾಗಿದೆ. ಎನ್‌ಡಿಟಿವಿ ಸಂಸ್ಥೆ ನಡೆಸಿದ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಎನ್‌ಡಿಎಗೆ 103, ಮಹಾಘಟಬಂಧನ 124 ಹಾಗೂ ಎಲ್‌ಜೆಪಿಗೆ 6 ಸ್ಥಾನಗಳು ಲಭಿಸಲಿವೆ. ದೈನಿಕ್‌ ಭಾಸ್ಕರ್‌ ಸಮೀಕ್ಷೆ ಮಾತ್ರ ರಾಜ್ಯ
ದಲ್ಲಿ ಎನ್‌ಡಿಎ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.

243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 122 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಸಮೀಕ್ಷೆಗಳ ಅಂಕಿ ಅಂಶಗಳನ್ನು ನೋಡಿದರೆ, ಯಾರೇ ಗೆದ್ದರೂ ಅದು ಬಹುದೊಡ್ಡ ಗೆಲುವು ಆಗಿರಲಾರದು ಎಂಬ ಅಂಶ ಗಮನಕ್ಕೆ ಬರುತ್ತದೆ. ಇಂಥ ಸ್ಥಿತಿಯಲ್ಲಿ, ನಿತೀಶ್‌ ಅವರ ವಿರುದ್ಧ ತೊಡೆತಟ್ಟಿ ಕಣಕ್ಕೆ ಇಳಿದಿರುವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿಯು ಕೆಲವು ಸ್ಥಾನಗಳನ್ನು ಪಡೆದರೆ, ಚಿತ್ರಣ ಬದಲಾಗಬಹುದು.

ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ನಿತೀಶ್‌ ಕುಮಾರ್‌ ಅವರಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ವಿಶ್ಲೇಷಕರು ಚುನಾ ವಣೆಯ ಸಂದರ್ಭದಲ್ಲಿ ಹೇಳಿದ್ದರು. ನಿತೀಶ್‌ ಅವರ ಕೆಲವು ಚುನಾವಣಾ ರ್‍ಯಾಲಿಗಳಲ್ಲಿ ಜನರು ನೇರವಾಗಿ ಅವರ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದೂ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT