ಭಾನುವಾರ, ಡಿಸೆಂಬರ್ 6, 2020
20 °C

ಆತ್ಮ ನಿರ್ಭರ ಭಾರತ ಸಾಕಾರಗೊಳಿಸಲು ನಿತೀಶ್ ಕುಮಾರ್‌ಗೆ ಅಧಿಕಾರ ನೀಡಿ: ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Narendra Modi

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಸಾರಾಮ್‌ನ ಬೈದಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಪ್ರಧಾನಿಯವರನ್ನು ವೇದಿಕೆಗೆ ಬರ ಮಾಡಿಕೊಂಡು ಸ್ವಾಗತ ಭಾಷಣ ಮಾಡಿದ ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಪ್ರಧಾನಿಯವರಿಗೆ ಸ್ವಾಗತ. ಕೋವಿಡ್  ಸಂಕ್ರಾಮಿಕ ರೋಗ ಭೀತಿ ಇದ್ದರೂ ಅತ್ಯಧಿಕ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಬಿಹಾರ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಲಭಿಸಿದೆ. ಇದೀಗ ರಾಜ್ಯದಲ್ಲಿರುವನ ಪ್ರತಿಯೊಂದು ಗ್ರಾಮಗಳಿಗೂ ಸೌರಶಕ್ತಿ ಪೂರೈಸಬೇಕು ಎಂಬ ಆಶಯ ನಮ್ಮದು. ನೀವೆಲ್ಲರೂ ಎನ್‌ಡಿಎ ಅಭ್ಯರ್ಥಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು 

ಆತ್ಮನಿರ್ಭರ ಭಾರತ ಸಾಕಾರಗೊಳಿಸಲು ನಿತೀಶ್ ಕುಮಾರ್ ಸರ್ಕಾರವನ್ನು ಅಧಿಕಾರಕ್ಕೇರಿಸುವುದು ಮುಖ್ಯ.
 
ಬಿಹಾರದ ಮೂಲ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಕೆಲಸ ಮಾಡಲಾಗಿದೆ.

ಹಲವಾರು ಪರೀಕ್ಷೆಗಳಿಂದಾಗಿ ಬಿಹಾರದ ಯುವಜನತೆ ಸಮಯ, ಶಕ್ತಿ ಮತ್ತು ಹಣ ವ್ಯರ್ಥ ಮಾಡಿಕೊಂಡಿದ್ದಾರೆ. ಇದೀಗ ಸಾಮಾನ್ಯ ಪ್ರವೇಶ ಪರೀಕ್ಷೆ ಆ ನೋವನ್ನು ನಿವಾರಿಸಿದೆ. 

ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೇರಿದರೆ ಶೀಘ್ರವೇ ಸ್ವಾಮಿತ್ವ ಕಾರ್ಡ್‌ನ ಪ್ರಯೋಜನ ಪಡೆಯಲಿದ್ದೀರಿ.

ನಾನು  3-4 ವರ್ಷ ನಿತೀಶ್ ಜತೆ ಕೆಲಸ ಮಾಡಿದ್ದೆ. ಆ ಕಾಲಾವಧಿಯಲ್ಲಿ  ನಾವು ಸಾಕಷ್ಟು ಕೆಲಸ ಮಾಡಿದ್ದೇವೆ.

ಬಿಹಾರ ಪ್ರಗತಿ ಹೊಂದುವುದಿಲ್ಲ ಎಂದು ತಿಳಿದಾಗ ನಿತೀಶ್ ರಾಜೀನಾಮೆ ನೀಡಬೇಕಾಯಿತು ಮತ್ತು ಬದಲಾಗಿ 15 ವರ್ಷಗಳ ಹಿಂದಕ್ಕೆ ಹೋಗಬೇಕಾಯಿತು.

ನಾನು ಗುಜರಾತ್ ಸಿಎಂ ಆಗಿದ್ದಾಗ ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಬಿಹಾರದ ಪ್ರಗತಿಗೆ ತಡೆಯೊಡ್ಡಬೇಡಿ ಎಂದು ಯುಪಿಎ ಸರ್ಕಾರಕ್ಕೆ ನಿತೀಶ್ ಹೇಳಿದ್ದರು. ಆದರೆ ಅವರು 10 ವರ್ಷ ನಿತೀಶ್ ಅವರಿಗೆ ಕೆಲಸ ಮಾಡಲು ಬಿಡಲಿಲ್ಲ. 

ಅವರು 15 ವರ್ಷಗಳ ಕಾಲ ಬಿಹಾರವನ್ನು ಲೂಟಿ  ಮಾಡಿದರು. ಅವರನ್ನು ಅಧಿಕಾರದಿಂದ ಕಿತ್ತೆಸೆದು ನಿತೀಶ್ ಅವರಿಗೆ ಸ್ಥಾನನೀಡಿದಾಗ ಅವರಿಗೆ ಆಘಾತವಾಗಿತ್ತು.

370ನೇ ವಿಧಿ ತೆಗೆದುಹಾಕಲು ದೇಶ  ಕಾಯುತ್ತಿತ್ತು. ಎನ್‌ಡಿಎ ಅದನ್ನು ತೆಗೆದುಹಾಕಿತ್ತು. ಇದೀಗ ವಿಪಕ್ಷಗಳು ಅದನ್ನು ವಾಪಸ್ ತರಲು ಬಯಸುತ್ತಿವೆ. 

ರೈತರ ಬ್ಯಾಂಕ್ ಖಾತೆಗಳಿಗೆ ನೇರ ಹಣ ಸಂದಾಯ ಮಾಡಿದಾಗ ಅಥವಾ ರಕ್ಷಣಾ ವ್ಯವಸ್ಥೆಗಾಗಿ ನಾವು ರಫೇಲ್ ಖರೀದಿಸಿದಾಗ ಅವರು ದಲ್ಲಾಳಿಗಳ ಪರ ವಹಿಸಿದರು.

ಕೊರೊನಾ ಕಾಲದಲ್ಲಿ ಬಡವರು ಮತ್ತು ಮಹಿಳೆಯರಿಗೆ ಪಡಿತರ ಮತ್ತು ಹಣ ಸಹಾಯ ಲಭಿಸಿದೆ.

2014ರಲ್ಲಿ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ಬಿಹಾರಕ್ಕೆ ಡಬಲ್ ಎಂಜಿನ್ ಉತ್ತೇಜನ ಸಿಕ್ಕಿತ್ತು

ಬಿಹಾರದ ಯೋಧರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಅವರಿಗೆ ನಾನು ಗೌರವ ಸಲ್ಲಿಸುತ್ತಿದ್ದೇನೆ. ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಇಲ್ಲಿನ ಪುತ್ರರು ಹುತಾತ್ಮರಾಗಿದ್ದಾರೆ. ಅವರ ಚರಣಗಳಿಗೆ ತಲೆ ಬಾಗಿ ನಾನು ಗೌರವ ಅರ್ಪಿಸುತ್ತಿದ್ದೇನೆ.

 

ವದಂತಿ ಹರಡುವವರನ್ನು ಪರಾಭವಗೊಳಿಸುವ ಜಾಣ್ಮೆಯುಳ್ಳವರಾಗಿದ್ದಾರೆ ಬಿಹಾರದ ಮತದಾರರು. ಬಿಹಾರ ರಾಜ್ಯವನ್ನು 'ಬಿಮಾರು' (ರೋಗ ಪೀಡಿತ) ರಾಜ್ಯವನ್ನಾಗಿ ಮಾಡಿದವರಿಗೆ ಇಲ್ಲಿ ಅಧಿಕಾರ ನೀಡುವುದಿಲ್ಲ ಎಂದು ಬಿಹಾರದ ಜನರು ನಿರ್ಧರಿಸಿದ್ದಾರೆ.

ಬಿಹಾರದಲ್ಲಿ ಅಧಿಕಾರ ನಡೆಸಿದವರು ಇದೀಗ ಅಭಿವೃದ್ಧಿಶೀಲ ರಾಜ್ಯವನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ತಮ್ಮನ್ನು ಹಿಂದೆ ತಳ್ಳಿದ, ಭ್ರಷ್ಟಾಚಾರದಿಂದ ಕೂಡಿದ್ದ, ರಾಜ್ಯದಲ್ಲಿ ನಿಯಮ ಮತ್ತು ಕಾನೂನಿನ ನಿಯಂತ್ರಣ ಇಲ್ಲದೇ ಇದ್ದ ಕಾಲವನ್ನು ನೀವು ಮರೆಯಬಾರದು.

ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೇರಲಿದೆ ಎಂದು ಪ್ರತಿಯೊಂದು ಸಮೀಕ್ಷೆಯು ಹೇಳುತ್ತಿದೆ, ಅದಕ್ಕಾಗಿ ಬಿಹಾರದ ಜನರಿಗೆ ಅಭಿನಂದನೆಗಳು.

ಕೊರೊನಾವೈರಸ್ ವಿರುದ್ಧ ಸಂಘಟಿತವಾಗಿ ಹೋರಾಡುತ್ತಿರುವ ಬಿಹಾರದ ಜನತೆಗೆ ಅಭಿನಂದನೆಗಳು. ಅದರ ಫಲಿತಾಂಶ ಇದೀಗ ಜಗತ್ತಿನ ಮುಂದಿದೆ.  

ಸಾಸಾರಾಮ್ ರ‍್ಯಾಲಿ ನಂತರ ಮೋದಿ ಗಯಾ ಮತ್ತು ಬಘಲ್‌ಪುರ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಇಂದು ಮೂರು ರ್‍ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು