ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಸಿಎಂ ನಿತೀಶ್‌ಗಿಂತ ಮಗ ನಿಶಾಂತ್‌ 5 ಪಟ್ಟು ಹೆಚ್ಚು ಶ್ರೀಮಂತ

Last Updated 2 ಜನವರಿ 2022, 8:00 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್‌ಗಿಂತ​ ಅವರಪುತ್ರ ನಿಶಾಂತ್ 5 ಪಟ್ಟು ಹೆಚ್ಚು ಶ್ರೀಮಂತ ಎಂಬುದು ವರದಿಯಾಗಿದೆ.

ವರ್ಷದ ಕೊನೆಯಲ್ಲಿ ಶಾಸಕರು, ಸಚಿವರು ಆದಾಯ ಘೋಷಣೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ವೆಬ್‌ಸೈಟ್‌ನಲ್ಲಿ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ.

ನಿತೀಶ್​ ಕುಮಾರ್​ ಬಳಿ ಒಟ್ಟಾರೆ ₹ 75ಲಕ್ಷ ಮೌಲ್ಯದ ಆಸ್ತಿ (ಸ್ಥಿರ ಮತ್ತು ಚರಾಸ್ತಿ) ಇದ್ದರೆ, ಅವರ ಪುತ್ರ​ ₹ 3.6 ಕೋಟಿ ಮೌಲ್ಯದ ಆಸ್ತಿ (ಸ್ಥಿರ ಮತ್ತು ಚರಾಸ್ತಿ) ಹೊಂದಿದ್ದಾರೆಎಂಬುದುಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ದಾಖಲಾಗಿದೆ.

ನಿತೀಶ್ ಕುಮಾರ್​ ₹29,385 ನಗದು ಹಣವನ್ನು ಇಟ್ಟುಕೊಂಡಿದ್ದಾರೆ. ಹಾಗೇ ಬ್ಯಾಂಕ್​ ಅಕೌಂಟ್​​ನಲ್ಲಿ₹ 42,763 ಹೊಂದಿದ್ದಾರೆ. ಪುತ್ರನ ಬಳಿ ₹ 16, 549 ನಗದು ಹಣವಿದ್ದು ಬ್ಯಾಂಕ್​ನಲ್ಲಿ ₹ 1.28 ಕೋಟಿ ಎಫ್‌ಡಿ ಇಟ್ಟಿದ್ದಾರೆ.

ದೆಹಲಿಯ ದ್ವಾರಕಾದ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಮುಖ್ಯಮಂತ್ರಿಯವರು ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. ತಮ್ಮ ಹಳ್ಳಿಯಲ್ಲಿ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿರುವುದಾಗಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT