ಭಾನುವಾರ, ಜನವರಿ 24, 2021
18 °C

ದೆಹಲಿಯಲ್ಲಿ ಮೃತಪಟ್ಟಿದ್ದ ಪಕ್ಷಿಗಳಲ್ಲಿ ‘ಹಕ್ಕಿ ಜ್ವರ’ ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯ ಹಲವು ಪ್ರದೇಶಗಳಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಪಕ್ಷಿಗಳಿಗೆ ‘ಹಕ್ಕಿ ಜ್ವರ’ ತಗುಲಿರುವುದು ಸೋಮವಾರ ದೃಢಪಟ್ಟಿದೆ.

ಸಂಜಯ್‌ ಸರೋವರದಲ್ಲಿ 10 ಬಾತುಕೋಳಿ ಮೃತಪಟ್ಟಿತ್ತು. ಮಯೂರ್‌ ವಿಹಾರದ ಮೂರನೇ ಹಂತದಲ್ಲಿ 50 ಕಾಗೆಗಳು ಸಾವಿಗೀಡಾಗಿತ್ತು. ಈ ಪಕ್ಷಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು  ಮೂರು ಬಾತುಕೋಳಿಯ ಮಾದರಿ, ನಾಲ್ಕು ಕಾಗೆಗಳ ಮಾದರಿ ಸೇರಿದಂತೆ ದ್ವಾರಕದಲ್ಲಿ ಮೃತಪಟ್ಟಿದ್ದ ಒಂದು ಕಾಗೆಯ ಮಾದರಿಯನ್ನು ಭೋಪಾಲ್‌ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

‘ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 8 ಮಾದರಿಗಳಲ್ಲೂ ‘ಹಕ್ಕಿ ಜ್ವರ’ ದೃಢಪಟ್ಟಿದೆ. ಕೆಲವು ಮಾದರಿಗಳನ್ನು ಜಲಂಧರ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳ ವರದಿ ಇನ್ನೂ ಬರಬೇಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ದೆಹಲಿ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಸಂಜಯ್‌ ಸರೋವರ, ಹೌಜ್ ಖಾಸ್ ಪಾರ್ಕ್, ದ್ವಾರಕದ ಸೆಕ್ಟರ್‌ 9 ಪಾರ್ಕ್‌, ಹಸ್ತಾಲ್‌ ಪಾರ್ಕ್‌ಗಳನ್ನು ಮುಚ್ಚಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು