ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ, ಮತ್ತೊಂದರ ಕಾಕ್‌ಪಿಟ್‌ನಲ್ಲಿ ಹಕ್ಕಿ!

Last Updated 17 ಜುಲೈ 2022, 13:02 IST
ಅಕ್ಷರ ಗಾತ್ರ

ನವದೆಹಲಿ: ತಾಂತ್ರಿಕ ಸಮಸ್ಯೆಗಳಿಂದಾಗಿ ಭಾರತದ ಎರಡು ವಿಮಾನಗಳು ತುರ್ತಾಗಿ ಬದಲಿ ವಿಮಾನ ನಿಲ್ದಾಣಗಳಲ್ಲಿ ಇಳಿದ ಹಾಗೂ ಮತ್ತೊಂದು ವಿಮಾನದ ಕಾಕ್‌ಪಿಟ್‌ನಲ್ಲಿ ಹಕ್ಕಿಯೊಂದು ಸಿಲುಕಿಕೊಂಡ ವಿದ್ಯಮಾನಗಳು ನಡೆದಿವೆ.

ಕ್ಯಾಬಿನ್‌ನಲ್ಲಿ ಸುಟ್ವ ವಾಸನೆ ಬಂದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕ್ಯಾಲಿಕಟ್-ದುಬೈ ವಿಮಾನವನ್ನು ಶನಿವಾರ ರಾತ್ರಿ ಮಸ್ಕತ್‌ನಲ್ಲಿ ಇಳಿಸಲಾಯಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಎಂಜಿನ್‌ನಲ್ಲಿ ದೋಷ ಕಂಡು ಬಂದಿದ್ದರಿಂದ ಇಂಡಿಗೊದ ಶಾರ್ಜಾ-ಹೈದರಾಬಾದ್ ವಿಮಾನವನ್ನು ಭಾನುವಾರ ಕರಾಚಿಯಲ್ಲಿ ಇಳಿಸಲಾಯಿತು.

ಕಾಕ್‌ಪಿಟ್‌ನಲ್ಲಿ ಪಕ್ಷಿ ಪತ್ತೆ:ಜುಲೈ 15 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಬಹರೇನ್-ಕೊಚ್ಚಿ ವಿಮಾನದ ಕಾಕ್‌ಪಿಟ್‌ನಲ್ಲಿ ಪಕ್ಷಿ ಪತ್ತೆಯಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ವಿಮಾನವು 37,000 ಅಡಿ ಎತ್ತರದಲ್ಲಿದ್ದಾಗ ಸಹ-ಪೈಲಟ್‌ ಬದಿಯ ಕೈಗವಸು ವಿಭಾಗದಲ್ಲಿ ಪಕ್ಷಿ ಕಂಡು ಬಂದಿದೆ. ವಿಮಾನವು ಕೊಚ್ಚಿಯಲ್ಲಿ ಸುರಕ್ಷಿತವಾಗಿ ಇಳಿಯಿತು.

ಮೇಲ್ನೋಟಕ್ಕೆ, ವಿದೇಶಿ ನಿಲ್ದಾಣದಲ್ಲಿನ ಸೇವೆಯಲ್ಲಿ ಲೋಪ ಕಂಡುಬಂದಂತೆ ತೋರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೂರೂ ಘಟನೆಗಳ ಬಗ್ಗೆ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 14ರಂದು, ಎಂಜಿನ್‌ಗಳಲ್ಲಿ ಕಂಪನಗಳು ಕಂಡು ಬಂದಿದ್ದರಿಂದ ಇಂಡಿಗೊದ ದೆಹಲಿ-ವಡೋದರಾ ವಿಮಾನವನ್ನು ಮುನ್ನೆಚ್ಚರಿಕೆಯಿಂದ ಜೈಪುರಕ್ಕೆ ತಿರುಗಿಸಲಾಗಿತ್ತು.

ಜೂನ್ 19 ರಿಂದ ಎಂಟು ಬಾರಿ ಅಸಮರ್ಪಕ ಕಾರ್ಯಾಚರಣೆಗಾಗಿ ಸ್ಪೈಸ್‌ಜೆಟ್ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿ, ಪ್ರತಿಕ್ರಿಯೆ ನೀಡಲು ಮೂರು ವಾರ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT