ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

Last Updated 24 ಜನವರಿ 2021, 10:41 IST
ಅಕ್ಷರ ಗಾತ್ರ

ರಾಯಪುರ: ಛತ್ತೀಸ್‌ಗಡದ ಬಿಲಾಸ್‌ಪುರ ಜಿಲ್ಲೆಯ ಆಶ್ರಯತಾಣದಲ್ಲಿ ಮಹಿಳಾ ವಾಸಿಗಳ ಮೇಲೆ ದೈಹಿಕ ಮತ್ತು ಲೈಂಗಿಕ ಕಿರುಕುಳ ನಡೆದಿದೆ ಎಂಬ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಬಿಜೆಪಿ ಭಾನುವಾರ ಒತ್ತಾಯಿಸಿದೆ.

ಆಶ್ರಯ ತಾಣವನ್ನು ಸರ್ಕಾರಿ ನೆರವಿನಲ್ಲಿ ಸೇವಾ ಸಂಸ್ಥೆಯೊಂದು ನಡೆಸುತ್ತಿದೆ. ಅತ್ಯಾಚಾರ ಆರೋಪದ ಮೇಲೆ ಇದರ ವ್ಯವಸ್ಥಾಪಕನನ್ನು ಜನವರಿ 21ರಂದು ಬಂಧಿಸಲಾಗಿದೆ. ಹಾಗೆಯೇ ಇತರೆ ಮೂವರನ್ನು ದೈಹಿಕ ದೌರ್ಜನ್ಯ ನಡೆಸಿದ ಆರೋಪದಡಿ ಬಂಧಿಸಲಾಗಿದೆ

ಆರೋಪ ಕುರಿತು ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರವೇ ಸತ್ಯ ಹೊರಬರಲಿದೆ. ಪ್ರಕರಣದಲ್ಲಿ ಪೊಲೀಸರ ಪಾತ್ರವಿರುವ ಆರೋಪದ ಕಾರಣ ನ್ಯಾಯಾಂಗ ತನಿಖೆ ನಡೆಸುವುದು ಅಗತ್ಯ ಎಂದು ವಿದಾನಸಭೆ ವಿರೋಧಪಕ್ಷದ ನಾಯಕ ಧರ್ಮಲಾಲ್‌ ಕೌಶಿಕ್‌ ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಇದು, ನಾಚಿಕೇಗೇಡಿನ ಬೆಳವಣಿಗೆ. ರಾಜ್ಯ ಸರ್ಕಾರದ ಇಲಾಖೆಯೇ ನಡೆಸುವ ಆಶ್ರಯತಾಣದಲ್ಲಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT