ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಯಾತ್ರೆಗೆ ಪೊಲೀಸರ ತಡೆ, ಕೊಲ್ಕತ್ತಾದಲ್ಲಿ ಘರ್ಷಣೆ

Last Updated 8 ಅಕ್ಟೋಬರ್ 2020, 10:03 IST
ಅಕ್ಷರ ಗಾತ್ರ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಸಚಿವಾಲಯ 'ನಬನ್ನಾ'ದಹೊರಭಾಗ ನೂರಾರು ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು. ಗಲಭೆ ನಿಯಂತ್ರಣ ಸಮವಸ್ತ್ರ ತೊಟ್ಟಿದ್ದ ಪೊಲೀಸರು ಅಶ್ರುವಾಯು ಶೆಲ್‌ ಮತ್ತು ವಾಟರ್ ಕೆನನ್‌ಗಳನ್ನು ಬಳಸಿ ಗುಂಪು ಚದುರಿಸಲು ಯತ್ನಿಸಿದರು.

'ಪೊಲೀಸರು ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಕಲ್ಲುತೂರಾಟದಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಂಡಿಲ್ಲ' ಎಂದು ಬಿಜೆಪಿ ನಾಯಕ ಲೋಕೆತ್ ಚಟರ್ಜಿ ಆಕ್ರೋಶ ವ್ಯಕ್ತಪಡಿಸಿದರು.

'ಜನರು ಗುಂಪುಸೇರುವಂತಿಲ್ಲ' ಎಂದು ಸೂಚಿಸಿದ್ದ ಪಶ್ಚಿಮ ಬಂಗಾಳ ಸರ್ಕಾರವುಬಿಜೆಪಿ ಆಯೋಜಿಸಿದ್ದ 'ನಬನ್ನ ಚಲೋ' ಪ್ರತಿಭಟನೆಗೆ ಅನುಮತಿ ನಿರಾಕರಿಸಿತ್ತು. ಬಿಜೆಪಿ ಯುವ ಘಟಕದ ಮುಖ್ಯಸ್ಥ ತೇಜಸ್ವಿ ಸೂರ್ಯ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಕೊಲ್ಕತ್ತಾಗೆ ಬಂದಿದ್ದರು. ಇದು ಕೊಲ್ಕತ್ತಾದಲ್ಲಿ ಬಿಜೆಪಿಯ ಶಕ್ತಿಪ್ರದರ್ಶನ ಎಂದೇ ವಿಶ್ಲೇಷಿಸಲಾಗಿತ್ತು.

ಸ್ಯಾನಿಟೈಸೇಶನ್‌ಗಾಗಿಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಯೂ ಇರುವ ಸಚಿವಾಲಯವನ್ನು ಇಂದಿನಿಂದ ಎರಡು ದಿನಗಳ ಅವಧಿಗೆ ಮುಚ್ಚಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ಬಿಜೆಪಿ ಬಗ್ಗೆ ಮಮತಾ ಬ್ಯಾನರ್ಜಿಗೆ ಎಷ್ಟು ಭಯವಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಕೊರೊನಾ ಭೀತಿ ಮಧ್ಯೆ ರಾಜಕೀಯ ಸಂಘರ್ಷ

ಪಶ್ಚಿಮ ಬಂಗಾಳದಲ್ಲಿನಿನ್ನೆಯಷ್ಟೇ ಒಂದು ದಿನದಲ್ಲಿ ಅತಿಹೆಚ್ಚು ಸಂಖ್ಯೆಯ (3,455) ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ಈವರೆಗಿನ ದಾಖಲೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಎರಡೂ ಪಕ್ಷಗಳ ನಡುವಣ ರಾಜಕೀಯ ಸಮರ ತಾರಕಕ್ಕೇರಿದೆ. 'ಬಿಜೆಪಿ ಕಾರ್ಯಕರ್ತರು ಸೋಂಕು ತಡೆ ಸೂಚನೆಗಳನ್ನು ಪಾಲಿಸುತ್ತಿಲ್ಲ' ಎಂದು ಟಿಎಂಸಿ ಆರೋಪಿಸಿದೆ. 'ನಮಗೊಂದು ನಿಯಮ, ಅವರಿಗೊಂದು ನಿಯಮವೇ' ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯಪ್ರಶ್ನಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಒಟ್ಟು 42 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 18 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ವಿಧಾನಸಭಾ ಚುನಾವಣೆಯು ಸನಿಹದಲ್ಲಿರುವ ರಾಜ್ಯದಲ್ಲಿ ಬಿಜೆಪಿ ಅನಧಿಕೃತವಾಗಿ ಪ್ರಚಾರ ಈಗಾಗಲೇ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT