ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತ ವರ್ತನೆ: ಬಿಹಾರ ಬಿಜೆಪಿ ಶಾಸಕ ಕಲಾಪದಿಂದ ಎರಡು ದಿನ ಅಮಾನತು

Last Updated 14 ಮಾರ್ಚ್ 2023, 16:05 IST
ಅಕ್ಷರ ಗಾತ್ರ

ಪಟ್ನಾ: ಅನುಚಿತ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರ ಬಿಜೆಪಿ ಶಾಸಕ ಲಖೇಂದ್ರ ರೌಷಣ್‌ ಅವರನ್ನು ವಿಧಾನಸಭಾ ಕಲಾಪದಿಂದ ಎರಡು ದಿನ ಅಮಾನತುಗಳಿಸಲಾಗಿದೆ.

ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರ ನಿರ್ಧಾರವನ್ನು ಖಂಡಿಸಿ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿ ಕಲಾಪದಿಂದ ಹೊರನಡೆದರು. ಆದಾಗ್ಯೂ ಸ್ಪೀಕರ್‌ ನಿರ್ಧಾರವನ್ನು ಸರ್ಕಾರ ಪ್ರಶಂಸಿಸಿತು.

ಚೌಧರಿ ಅವರು ಅಮಾನತು ಮಾಡಿ ಆದೇಶಿಸಿದ ನಂತರ ಲಖೇಂದ್ರ ರೌಷಣ್‌ ಅವರು ಮಾತನಾಡಿ, ‘ಮೈಕ್ರೋಫೋನ್‌ ಕಿತ್ತು ಬಿಸಾಡಿಲ್ಲ’ ಎಂದು ವಾದ ಮಾಡಿದರು.

‘ಕಲಾಪದಲ್ಲಿ ಭಾಗಿಯಾಗಿದ್ದೆ. ಪ್ರಶ್ನೋತ್ತರ ಅವಧಿಯಲ್ಲಿ ನನ್ನ ಸರದಿ ಬಂದಾಗ ಮೈಕ್ರೊಫೋನ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸರಿಪಡಿಸಲು ಪ್ರಯತ್ನಿಸಿದೆ. ಆಗ ಅದು ಕಿತ್ತು ಬಂತು’ ಎಂದು ಹೇಳಿದರು.

ಸತ್ಯ ದೇವ್‌ ರಾಮ್ ಅವರು ನನ್ನ ವಿರುದ್ಧ ನಿಂದನಾತ್ಮಕ ಭಾಷೆ ಬಳಸಿದ್ದಾರೆ. ದುರ್ನಡತೆ ಆರೋಪದಲ್ಲಿ ನನ್ನನ್ನು ತಪ್ಪಿತಸ್ಥನಾಗಿ ಮಾಡಲಾಗಿದೆ. ದಲಿತ ಶಾಸಕನಿಗೆ ಈ ರೀತಿಯಾಗಿ ಕಿರುಕುಳ ನೀಡಬಾರದು ಎಂದು ಹೇಳಿದರು.

ಈ ನಡುವೆ ಸದನದಲ್ಲಿ ಕೆಲ ಕಾಲ ಗದ್ದಲ ಉಂಟಾಗಿ, ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT