ಬುಧವಾರ, ಆಗಸ್ಟ್ 17, 2022
25 °C

ಪೆಟ್ರೋಲ್ ಬೆಲೆ ಏರಿಕೆ ಐತಿಹಾಸಿಕ ಶೋಷಣೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರ ಸುಮಾರು ₹90ರಷ್ಟಾಗಿರುವುದು ಕೇಂದ್ರ ಸರ್ಕಾರವು ಜನರ ಮೇಲೆ ನಡೆಸುತ್ತಿರುವ ಐತಿಹಾಸಿಕ ಶೋಷಣೆ ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿರುವ ಅವರು, ‘ಸಂಸ್ಕರಣಗೊಂಡ ಬಳಿಕ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆ ₹30ರಷ್ಟಾಗುತ್ತದೆ. ಎಲ್ಲ ತೆರಿಗೆಗಳು, ಪೆಟ್ರೋಲ್‌ ಪಂಪ್ ಕಮಿಷನ್ ₹60ರಷ್ಟಾಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್‌ ಅನ್ನು ಗರಿಷ್ಠ ಪ್ರತಿ ಲೀಟರ್‌ಗೆ ₹40ರಂತೆ ಮಾರಾಟ ಮಾಡಬೇಕು’ ಎಂದು ಉಲ್ಲೇಖಿಸಿದ್ದಾರೆ.

ಸೋಮವಾರದ ವರೆಗೆ ಸತತ ಆರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಸೋಮವಾರ ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ₹83.71 ಆಗಿತ್ತು. ಡೀಸೆಲ್ ಬೆಲೆಯು ₹73.87 ಆಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈಗ 2018ರ ಸೆಪ್ಟೆಂಬರ್‌ ನಂತರದ ಗರಿಷ್ಠ ಮಟ್ಟದಲ್ಲಿ ಇದೆ.

ಇದನ್ನೂ ಓದಿ: 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು