ಬುಧವಾರ, ಅಕ್ಟೋಬರ್ 20, 2021
28 °C
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ

ಬಿಜೆಪಿ ಮತ್ತೆ ಕೋಮು ರಾಜಕೀಯಕ್ಕೆ ಮರಳುತ್ತಿದೆ: ಮಾಯಾವತಿ ಆರೋ‍ಪ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯು ತನ್ನ ಸಂಕುಚಿತ ಕೋಮು ಕಾರ್ಯಸೂಚಿಯೊಂದಿಗೆ ಮರಳಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಗುರುವಾರ ಆರೋ‍ಪಿಸಿದ್ದಾರೆ. 

‘ಚುನಾವಣೆಗೂ ಮುನ್ನ ಬಿಜೆಪಿ ಮತ್ತೆ ತನ್ನ ಸಂಕುಚಿತ ರಾಜಕೀಯ ಆರಂಭಿಸಿದೆ. ಆದರೆ, ಅವರ ಅಭಿವೃದ್ಧಿ ಯೋಜನೆಗಳು ಪೊಳ್ಳು ಎಂದು ಈಗಾಗಲೇ ಸಾಬೀತಾಗಿದೆ’ ಎಂದು ಎಂದು ಅವರು ಟ್ವೀಟ್‌ನಲ್ಲಿ ಟೀಕಿಸಿದ್ದಾರೆ. 

‘ಪಕ್ಷವು ಈಗ ಧಾರ್ಮಿಕ ಭಾವನೆಗಳು, ಹಿಂದೂ–ಮುಸ್ಲಿಂ ವಿಭಜನೆ ಮೊದಲಾದ ವಿಚಾರಗಳಲ್ಲಿ ರಾಜಕೀಯ ಮಾಡಲು ಆರಂಭಿಸಿದೆ. ಆದರೆ, ಜನರು ಮತ್ತೊಮ್ಮೆ ಮೋಸ ಹೋಗುವುದಿಲ್ಲ. ’ ಎಂದು ಅವರು ಹೇಳಿದರು. 

‘ರಾಜ್ಯದ ಜನರ ತಲಾ ಆದಾಯ ಕುಂಠಿತವಾಗಿರುವುದು ಮತ್ತು ಇನ್ನೂ ಬಡವರು ಹಾಗೂ ಹಿಂದುಳಿದವರಾಗಿ ಉಳಿದಿರುವುದನ್ನು ಇತ್ತೀಚಿನ ರಿಸರ್ವ್‌ ಬ್ಯಾಂಕಿನ ಅಂಕಿ ಅಂಶಗಳು ತೋರಿಸುತ್ತಿವೆ. ಇವು ಬಿಜೆಪಿಯ ಅಭಿವೃದ್ಧಿ ಯೋಜನೆಗಳು ಕೇವಲ ಬಿಸಿ ಗಾಳಿಯಂತೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು