ಶುಕ್ರವಾರ, ಜೂನ್ 18, 2021
26 °C

ತಮಿಳುನಾಡು| ರಾಸಾಯನಿಕ ಘಟಕದಲ್ಲಿ ಬಾಯ್ಲರ್‌ ಸ್ಫೋಟ: 4 ಸಾವು, 10 ಮಂದಿಗೆ ಗಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಕಡಲೂರು (ತಮಿಳುನಾಡು): ಇಲ್ಲಿನ ರಾಸಾಯನಿಕ ಘಟಕವೊಂದರಲ್ಲಿ  ಬಾಯ್ಲರ್ ಸ್ಫೋಟಗೊಂಡು ಅಮೋನಿಯಾ ಅನಿಲ ಸೋರಿಕೆಯಾಗಿದ್ದರಿಂದ ಮಹಿಳೆ ಸೇರಿದಂತೆ ನಾಲ್ವರು ಕಾರ್ಮಿಕರು ಗುರುವಾರ ಮೃತಪಟ್ಟಿದ್ದಾರೆ.

ದುರಂತದಲ್ಲಿ  10 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

‘ಮೃತರು ಬೆಂಕಿಗೆ ಆಹುತಿಯಾಗಿಲ್ಲ. ಅವರು ಉಸಿರುಕಟ್ಟುವಿಕೆಯಿಂದ ಸತ್ತಿದ್ದಾರೆ’ ಎಂದು ಕಡಲೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಸುದ್ದಿಗಾರರಿಗೆ ತಿಳಿಸಿದರು.

ಮೃತರ ಕುಟುಂಬದವರಿಗೆ ತಲಾ ₹ 3 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಘೋಷಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು