ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಕಡ್ಡಾಯಕ್ಕೆ ಮಸೂದೆ ಅಂಗೀಕಾರ

ಮುಂಬೈ: ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಮಹಾರಾಷ್ಟ್ರದ ವಿಧಾನಸಭೆ ಹಾಗೂ ಪರಿಷತ್ನಲ್ಲಿ ಅವಿರೋಧವಾಗಿ ಗುರುವಾರ ಅಂಗೀಕರಿಸಲಾಯಿತು.
ವಿಧಾನ ಪರಿಷತ್ನಲ್ಲಿ ಈ ವಿಷಯ ಕುರಿತು ಮಾತನಾಡಿದ ಸಚಿವ ಸುಭಾಷ್ ದೇಸಾಯಿ, ‘ಮಹಾರಾಷ್ಟ್ರ ಆಡಳಿತ ಭಾಷೆ ಕಾಯ್ದೆ–1964’ರ ಪ್ರಕಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಭಾಷೆ ಬಳಕೆ ಕಡ್ಡಾಯ ಇರಲಿಲ್ಲ. ಈ ಲೋಪವನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಮಸೂದೆಯನ್ನು ಅಂಗೀಕರಿಸಲಾಗಿದೆ’ ಎಂದರು.
‘ವಿದೇಶಗಳ ರಾಯಭಾರಿಗಳ ಜೊತೆ ಸಂವಹನ ಹಾಗೂ ಸರ್ಕಾರದ ನಿರ್ದಿಷ್ಟ ಕಾರ್ಯಗಳಿಗಾಗಿ ಇಂಗ್ಲಿಷ್ ಅಥವಾ ಹಿಂದಿ ಬಳಸಲು ಅನುಮತಿ ನೀಡಲಾಗಿದೆ’ ಎಂದರು.
ಬಿಜೆಪಿ ಶಾಸಕ ಯೋಗೇಶ್ ಸಾಗರ್ ಮಾತನಾಡಿ, ‘ಚುನಾವಣೆಗಳು ಹತ್ತಿರ ಬಂದಾಗ ಮರಾಠಿ ಬಗ್ಗೆ ಏಕೆ ಇಂಥ ಪ್ರೀತಿ ಕಂಡುಬರುತ್ತದೆ’ ಎಂದು ಪ್ರಶ್ನಿಸಿದರು. ಈ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ ಅವರು, ಎಲ್ಲ ಕಡತಗಳು ಮರಾಠಿಯಲ್ಲಿಯೇ ಇರಬೇಕು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.