ನವದೆಹಲಿ: 17 ವರ್ಷದ ಹುಡುಗನನ್ನು ಆತನ ಶಾಲೆಯ ಕಿರಿಯ ವಿದ್ಯಾರ್ಥಿಯೇ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆಗ್ನೇಯ ದೆಹಲಿಯ ಓಖ್ಲಾ ಪ್ರದೇಶದಲ್ಲಿ ತೆಹಖಂಡದ ಸರ್ಕಾರಿ ಶಾಲೆಯ ಹೊರಗೆ ಶುಕ್ರವಾರ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯು ಆರೋಪಿಯ ತಾಯಿಯನ್ನು ನಿಂದಿಸಿದ್ದಾನೆ. ಆಕೆಯ ಕ್ಷಮೆ ಕೇಳಲು ನಿರಾಕರಿಸಿದಾಗ ಆತನಿಗೆ ಇರಿಯಲಾಗಿದೆ. ಸದ್ಯ ಆರೋಪಿ ಬಾಲಕನನ್ನು ಬಂಧಿಸಲಾಗಿದೆ. ಘಟನೆ ನಡೆದಾಗ ಇಬ್ಬರು ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

11ನೇ ತರಗತಿಯ ವಿದ್ಯಾರ್ಥಿಗೆ ಮೂರು ಇರಿತದ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ವಿಚಾರಣೆಯ ಸಮಯದಲ್ಲಿ, 15 ವರ್ಷದ ಹುಡುಗ ಸಂತ್ರಸ್ತ ಶಾಲೆ ಮುಗಿಸಿ ತಿರುಗಾಡುತ್ತಿದ್ದಾಗ ಇರಿದಿರುವುದಾಗಿ ತಿಳಿಸಿದ್ದಾನೆ. ಆರೋಪಿ ಬಾಲಕ 10 ನೇ ತರಗತಿಯ ವಿದ್ಯಾರ್ಥಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.