ಮಂಗಳವಾರ, ಮಾರ್ಚ್ 21, 2023
29 °C

ಗಣರಾಜ್ಯೋತ್ಸವ ಸಂಭ್ರಮ: ಉಭಯ ದೇಶದ ಯೋಧರು ಸಿಹಿ ವಿನಿಮಯ

ಐಎಎ‌ನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ 74ನೇ ಗಣರಾಜ್ಯೋತ್ಸವವನ್ನ ಅಂಗವಾಗಿ ಪಂಜಾಬ್‌ನ ಅಟ್ಟಾರಿ ಗಡಿ ಮತ್ತು ಜಮ್ಮುವಿನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪಾಕಿಸ್ತಾನದ ರೇಂಜರ್‌ಗಳು ಗುರುವಾರ ಮಧ್ಯಾಹ್ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯ ಜೊತೆ ಸಿಹಿ ವಿನಿಮಯ ಮಾಡಿಕೊಂಡಿಕೊಳ್ಳುವ ಮೂಲಕ ಶುಭಾಶಯಗಳನ್ನು ಕೋರಿದರು. ಈ ವೇಳೆ ಬೆಳಗ್ಗೆ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ತ್ರಿವರ್ಣ ಧ್ವಜವನ್ನು ಹಾರಿಸಿದರು.

ಅಟ್ಟಾರಿ ಗಡಿಯಲ್ಲಿ ಗೇಟ್‌ಗಳನ್ನು ಮಧ್ಯಾಹ್ನ ತೆರೆಯಲಾಯಿತು. ಉಭಯ ದೇಶದ ಭದ್ರತಾ ಪಡೆಗಳ ಸಿಬ್ಬಂದಿ ಅಲ್ಲಿ ಜಮಾಯಿಸಿದರು ಎಂದು ಬಿಎಸ್‌ಎಫ್ ತಿಳಿಸಿದೆ.

ಇದಲ್ಲದೇ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಸಿಹಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯ ಕೋರಿದರು.

ದೇಶದ 74ನೇ ಗಣರಾಜ್ಯೋತ್ಸವದಂದು ಭಾರತ ಮತ್ತು ಪಾಕಿಸ್ತಾನದ ವಿವಿಧ ರಾಜ್ಯಗಳ ಗಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು ಹಾಗೂ ರಾಷ್ಟ್ರಗೀತೆ ಮೊಳಗಿತು. ನಂತರ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಗಡಿಯಲ್ಲಿ ಸಿಹಿ ವಿನಿಮಯದ ಸಂಪ್ರದಾಯವು ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಹೊರತಾಗಿ ಈದ್, ಹೋಳಿ ಮತ್ತು ದೀಪಾವಳಿ ಸಂದರ್ಭದಲ್ಲಿ ನಡೆಯುತ್ತದೆ. 

ಪ್ರತಿ ವರ್ಷ ಭಾರತ-ಪಾಕಿಸ್ತಾನದ ವಿವಿಧ ಗಡಿಗಳಲ್ಲಿ ಸಹೋದರತ್ವದ ಸಂದೇಶವನ್ನು ಸಾರಲು ಸಲುವಾಗಿ ಈ ಸಂಪ್ರದಾಯ ಆಚರಿಲಾಗುತ್ತದೆ.       

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು