ಗುರುವಾರ , ಜೂನ್ 30, 2022
22 °C

5,280 ಕಿ.ಮೀ ದ್ವಿಚಕ್ರ ವಾಹನ ಯಾತ್ರೆ ಮುಗಿಸಿದ ಬಿಎಸ್‌ಎಫ್‌ನ ಸೀಮಾ ಭವಾನಿ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: 36 ಸದಸ್ಯರ ಗಡಿ ಭದ್ರತಾ ಪಡೆಯ ಸೀಮಾ ಭವಾನಿ ಆಲ್ ವುಮೆನ್ ಡೇರ್‌ಡೆವಿಲ್ ಮೋಟಾರ್ ಸೈಕಲ್ ತಂಡವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆಯನ್ನು ಪೂರ್ಣಗೊಳಿಸಿದೆ. ಮಹಿಳಾ ಸಬಲೀಕರಣದ ಸಂದೇಶ ಸಾರಲು ಈ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಬಿಎಸ್‌ಎಫ್ ನ್‌ಸ್ಪೆಕ್ಟರ್ ಹಿಮಾಂಶು ಸಿರೊಹಿ ನೇತೃತ್ವದ ಈ ತಂಡವು 350 ಸಿಸಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮೋಟರ್ ಸೈಕಲ್‌ನಲ್ಲಿ 5,280 ಕಿ.ಮೀ ಕ್ರಮಿಸಿದೆ. ದೆಹಲಿ, ಪಂಜಾಬ್, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ತಂಡ ಸಂಚರಿಸಿದೆ.

ಯಾತ್ರೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಮಹಿಳಾ ಸಬಲೀಕರಣದ ಸಂದೇಶ ಸಾರುವ ಮತ್ತು ಮಹಿಳೆಯರ ಸಾಧನೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು.

ಯಾತ್ರೆಯುದ್ದಕ್ಕೂ ಸೀಮಾ ಭವಾನಿ ತಂಡದ ಸದಸ್ಯರು ವಿವಿಧ ಸಮುದಾಯಗಳ ಜನರನ್ನು ಭೇಟಿಯಾಗಿದ್ದು, ಮಹಿಳೆಯರ ಸಾಮರ್ಥ್ಯದ ಬಗ್ಗೆ ಸಂವೇದನಾಶೀಲರಾಗಿಸುವ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದು ಸಂಸ್ಥೆ ಹೇಳಿದೆ.

‘ಈ ಯಾತ್ರೆಯು ಬಹಳಷ್ಟು ಮಹಿಳೆಯರಿಗೆ ಸ್ಫೂರ್ತಿ ನೀಡಿದೆ. ಹಳೆಯ ಕಟ್ಟುಪಾಡುಗಳಿಂದ ಹೊರಬಂದು ತಮ್ಮ ಗುರಿ ಸಾಧನೆಗೆ ಮುಂದಾಗಲು ಧೈರ್ಯ ತುಂಬಲಿದೆ. ಈ ತಂಡಕ್ಕೆ ನಮ್ಮ ಶುಭಹಾರೈಕೆಗಳು ಎಂದು ರಾಯಲ್ ಎನ್‌ಫೀಲ್ಡ್‌ನ ಕಾರ್ಯಕಾರಿ ನಿರ್ದೇಶಕ ಆರ್. ಗೋವಿಂದ ರಾಜನ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು