ಬುಧವಾರ, ಜೂನ್ 16, 2021
27 °C

ಮ್ಯಾನ್ಮಾರ್‌ನಲ್ಲಿ ಗುಂಡೇಟು–ಭಾರತಕ್ಕೆ ಬಂದ ಮೂವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಮ್ಯಾನ್ಮಾರ್ ಸೈನಿಕರು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಮೂವರು ಮ್ಯಾನ್ಮಾರ್‌ ಪ್ರಜೆಗಳು ಗಡಿ ದಾಟಿ ಬಂದು ಮಣಿಪುರದ ವೈದ್ಯರಿಂದ ಜೀವ ಉಳಿಸುವಂತೆ ವೈದ್ಯಕೀಯ ಸಹಾಯ ಯಾಚಿಸಿದ್ದಾರೆ.

ಭಾರತದ ಗಡಿಯಲ್ಲಿರುವ ಮೊರೆಹ್‌ನಿಂದ ಧಾವಿಸಿ ಬಂದ ಈ ಮೂವರು ಗಾಯಾಳುಗಳು ಶುಕ್ರವಾರ ಬೆಳಿಗ್ಗೆ ಮಣಿಪುರದ ರಾಜಧಾನಿ ಇಂಪಾಲ್‌ನಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೂವರೂ 29ರಿಂದ 32 ವರ್ಷದೊಳಗಿನವರು.

ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಲು ನಿರಾಕರಿಸಿದರೂ, ಮೊರೆಹ್‌ನಿಂದ 5 ಕಿ.ಮೀ ದೂರದಲ್ಲಿರುವ ಮ್ಯಾನ್ಮಾರ್‌ನ ತಮುನಲ್ಲಿ ಗುರುವಾರ ಬೆಳಿಗ್ಗೆ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರ ಮೇಲೆ ನಡೆದಿರುವ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಗುಂಡೇಟಿನಿಂದ ಗಾಯಗೊಂಡು ಗಡಿಗೆ ಬಂದಿದ್ದರು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರ ಅವರಿಗೆ ಗಡಿ ಪ್ರವೇಶಿಸಲು ಅನುಮತಿ ನೀಡಲಾಯಿತು. ಅವರು ಗಂಭೀರ ಸ್ಥಿತಿಯಲ್ಲಿರುವುದರಿಂದ, ವೈದ್ಯಕೀಯ ಸಹಾಯಕ್ಕಾಗಿ ಬೇಡಿಕೊಂಡಿದ್ದರಿಂದ ಇದು ಕೇವಲ ಮಾನವೀಯ ನೆರವಿನ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ’ ಎಂದು ಮಣಿಪುರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು