ಶನಿವಾರ, ಏಪ್ರಿಲ್ 1, 2023
23 °C

ಮುಂಬೈ-ಅಹಮದಾಬಾದ್ ಬುಲೆಟ್‌ ರೈಲು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿದೆ: ಕೋರ್ಟ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ತಡೆ ನೀಡಬೇಕು ಎಂಬ ‘ಗೋದ್ರೇಜ್’ ಮತ್ತು ‘ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ’ಯ ಕೋರಿಕೆಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ.

ವಿಕ್ರೋಲಿ ಎಂಬಲ್ಲಿರುವ ಸಂಸ್ಥೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಮತ್ತು ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಗೋದ್ರೇಜ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆಯನ್ನು 'ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ' ಎಂದು ಬಾಂಬೆ ಹೈಕೋರ್ಟ್ ಪರಿಗಣಿಸಿದೆ.

‘ಭೂ ಸ್ವಾಧೀನದಲ್ಲಿ ಯಾವುದೇ ಅಕ್ರಮವಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿ ಆರ್.ಡಿ ಧನುಕಾ ಮತ್ತು ನ್ಯಾಯಮೂರ್ತಿ ಎಂ.ಎಂ ಸಾಥೆ ಅವರಿದ್ದ ವಿಭಾಗೀಯ ಪೀಠ ಯೋಜನೆಗೆ ತಡೆ ನೀಡಲು ನಿರಾಕರಿಸಿತು.

ಜಪಾನ್‌ನ ಸಹಯೋಗದೊಂದಿಗೆ 2019ರಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬುಲೆಟ್‌ ರೈಲು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಎಂದೇ ಕರೆಯಲಾಗುತ್ತಿದೆ.

508 ಕಿಲೋಮೀಟರ್ ಉದ್ದದ ಬುಲೆಟ್ ರೈಲು ಯೋಜನೆಯು 21 ಕಿಲೋಮೀಟರ್‌ನಷ್ಟು ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ನೆಲದಡಿಯ ಸುರಂಗ ಮಾರ್ಗದ ಪ್ರವೇಶ ದ್ವಾರವೊಂದು ವಿಕ್ರೋಲಿಯಲ್ಲಿರುವ ಗೋದ್ರೇಜ್ ಒಡೆತನದ ಭೂಮಿಯಲ್ಲೇ ಬರಲಿದೆ. ಈ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು