ಕನಿಷ್ಠ ಬೆಂಬಲ ಬೆಲೆ ವಿರೋಧಿಸುವ ಕೆನಡಾಕ್ಕೆ ಭಾರತದ ರೈತರ ಬಗ್ಗೆ ಕಾಳಜಿ: ಬಿಜೆಪಿ

ನವದೆಹಲಿ: ‘ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಭಾರತದ ಕೃಷಿ ನೀತಿಗಳು ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರವನ್ನು ತೀವ್ರವಾಗಿ ಟೀಕಿಸುವ ಕೆನಡಾ, ಈಗ ಭಾರತದ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಮೂಲಕ ನಮ್ಮ ದೇಶದ ರೈತರ ಬಗೆಗಿರುವ ‘ತೋರಿಕೆಯ ಕಾಳಜಿ‘ಯನ್ನು ಪ್ರದರ್ಶಿಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.
‘ರೈತರ ಹಿತದೃಷ್ಟಿಯಿಂದ ಭಾರತ ಜಾರಿಗೊಳಿಸಿರುವ ಆಮದು ಮೇಲಿನ ನಿರ್ಬಂಧವನ್ನು ಕೆನಡಾ ವಿರೋಧಿಸುತ್ತದೆ. ಆದರೆ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಭಾರತದ ಕೃಷಿ ನೀತಿಗಳನ್ನೇ ಪ್ರಶ್ನಿಸುತ್ತದೆ. ಭಾರತದ ರೈತರ ಬಗ್ಗೆ ಕೆನಡಾಕ್ಕೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದಕ್ಕೆ ಇದು ಸಾಕ್ಷಿ’ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಿಜಯ್ ಚೌಥೈವಾಲೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರೈತರು ಪ್ರತಿಭಟನೆ ಕೊನೆಗೊಳಿಸುವ ಭರವಸೆಯಿದೆ: ನರೇಂದ್ರ ಸಿಂಗ್ ತೋಮರ್
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುತ್ತಾ, ‘ಹಕ್ಕುಗಳ ರಕ್ಷಣೆಗಾಗಿ ನಡೆಯುವ ಶಾಂತಿಯುತ ಪ್ರತಿಭಟನೆಗಳನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ‘ ಎಂದು ಹೇಳಿದ್ದರು.
ಈ ಹೇಳಿಕೆ ಖಂಡಿಸಿ, ಭಾರತ ಶುಕ್ರವಾರ ಪ್ರತಿಭಟನೆ ದಾಖಲಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.