ಭಾನುವಾರ, ಮಾರ್ಚ್ 26, 2023
24 °C

ನೌಕಾಪಡೆ ಮಾಹಿತಿ ಸೋರಿಕೆ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಂಚಕ್ಕೆ ಪ್ರತಿಯಾಗಿ ‘ಸಬ್‌ಮರಿನ್‌ ಪ್ರಾಜೆಕ್ಟ್‌’ವೊಂದಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಸೋರಿಕೆ ಮಾಡಿರುವ ಆರೋಪದ ಮೇಲೆ ನೌಕಾಪಡೆಯ ಕಮಾಂಡರ್‌ ಶ್ರೇಣಿಯ ಅಧಿಕಾರಿಗಳನ್ನು ಬಂಧಿಸಿರುವ ಪ್ರಕರಣದಲ್ಲಿ ಸಿಬಿಐ ಮಂಗಳವಾರ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.

ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ, ಇಬ್ಬರು ನೌಕಾಪಡೆಯ ಕಮಾಂಡರ್‌ಗಳು ಸೇರಿ ಆರು ಮಂದಿಯನ್ನು ಆರೋಪಿಗಳು ಎಂದು ಸಿಬಿಐ ದಾಖಲಿಸಿದೆ.

ಅಜೀತ್ ಕುಮಾರ್ ಪಾಂಡೆ, ಕಮಾಂಡರ್‌ ಶ್ರೇಣಿಯ ನಿವೃತ್ತ ಅಧಿಕಾರಿ ರಣದೀಪ್ ಸಿಂಗ್, ಕೊರಿಯನ್ ಜಲಾಂತರ್ಗಾಮಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಮಾಂಡರ್ ಶ್ರೇಣಿಯ ಇನ್ನೊಬ್ಬ ನಿವೃತ್ತ ಅಧಿಕಾರಿ ಎಸ್‌.ಜೆ. ಸಿಂಗ್ ಹೆಸರು ಚಾರ್ಜ್‌ಶೀಟ್‌ನಲ್ಲಿದೆ. ಎಸ್‌.ಜೆ. ಸಿಂಗ್‌ ಖಾಸಗಿ ಕಂಪನಿಯಲ್ಲಿ ನಿರ್ದೇಶಕನಾಗಿದ್ದು, ಹವಾಲಾ ದಂಧೆ ನಡೆಸುತ್ತಿರುವ ಆರೋಪವೂ ಇದೆ.

ಸಿಬಿಐ ಇಬ್ಬರು ನಿವೃತ್ತ ಅಧಿಕಾರಿಗಳನ್ನು ಬಂಧಿಸಿತ್ತು. ಶೋಧದ ವೇಳೆ ಇವರಲ್ಲಿ ಒಬ್ಬರ ನಿವಾಸದಿಂದ ₹2 ಕೋಟಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್‌ ಪಿತೂರಿ ಆರೋಪದಡಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು