ಸೋಮವಾರ, ಮಾರ್ಚ್ 1, 2021
28 °C

ಕೇಂಬ್ರಿಡ್ಜ್ ಅನಾಲಿಟಿಕಾದ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಣಿಜ್ಯ ಉದ್ದೇಶಗಳಿಗಾಗಿ ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ದತ್ತಾಂಶವನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿದ್ದಕ್ಕಾಗಿ ಸಿಬಿಐ ಇಂಗ್ಲೆಂಡ್ ಮೂಲದ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಪ್ರಾಥಮಿಕ ತನಿಖೆಯ ಬಳಿಕ ಗ್ಲೋಬಲ್ ಸೈನ್ಸ್ ರಿಸರ್ಚ್ 'ದಿಸ್ ‌ಈಸ್ ‌ಯುವರ್ ‌ಡಿಜಿಟಲ್‌ಲೈಫ್' (thisisyourdigitallife) ಎಂಬ ಆ್ಯಪ್ ಅನ್ನು ರಚಿಸಿರುವುದು ಕಂಡುಬಂದಿದ್ದು, ಇದು 2014ರಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ತನ್ನ ಬಳಕೆದಾರರ ನಿರ್ದಿಷ್ಟ ಡೇಟಾಗಳನ್ನು ಸಂಗ್ರಹಿಸಲು ಫೇಸ್‌ಬುಕ್‌ನಿಂದ ಅಧಿಕೃತವಾಗಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದ್ದಾರೆ.

ನಂತರ ಈ ಕಂಪನಿಯು ಕೇಂಬ್ರಿಡ್ಜ್‌ ಅನಾಲಿಟಿಕಾದೊಂದಿಗೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿತು, ಇದರಿಂದಾಗಿ ತಾನು ಸಂಗ್ರಹಿಸಿದ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಅವಕಾಶ ಮಾಡಿಕೊಟ್ಟಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೇಸ್‌ಬುಕ್ 2016-17ರಲ್ಲಿ ಎರಡೂ ಸಂಸ್ಥೆಗಳಿಂದ ಪ್ರಮಾಣಪತ್ರಗಳನ್ನು ಸಂಗ್ರಹಿಸಿತ್ತು, 'ದಿಸ್ ‌ಈಸ್ ‌ಯುವರ್ ‌ಡಿಜಿಟಲ್‌ಲೈಫ್' ಅನ್ನು ಬಳಸಿಕೊಂಡು ಅವರು ಸಂಗ್ರಹಿಸಿದ ಡೇಟಾವನ್ನು ಲೆಕ್ಕಹಾಕಲಾಗಿದೆ ಮತ್ತು ನಾಶಪಡಿಸಲಾಗಿದೆ. ಆದರೆ, ಸಿಬಿಐ ನಡೆಸಿದ ವಿಚಾರಣೆಯಲ್ಲಿ ಡೇಟಾ ನಾಶಮಾಡಿರುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಕೆ ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್, 'ದಿಸ್ ‌ಈಸ್ ‌ಯುವರ್ ‌ಡಿಜಿಟಲ್‌ಲೈಫ್' ಅಪ್ಲಿಕೇಶನ್ ಬಳಕೆದಾರರ ಡೇಟಾವನ್ನು ಮತ್ತು ಅವರ ಫೇಸ್‌ಬುಕ್ ಸ್ನೇಹಿತರ ಡೇಟಾವನ್ನು ಅಪ್ರಾಮಾಣಿಕವಾಗಿ ಮತ್ತು ಮೋಸದಿಂದ ಸಂಗ್ರಹಿಸಿದೆ ಎಂಬುದು ತಿಳಿದಿರುವುದಾಗಿ ಅಧಿಕಾರಿಯೊಬ್ಬರು ಎಫ್‌ಐಆರ್‌ ಅನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಕೇಂಬ್ರಿಡ್ಜ್‌ ಅನಲಿಟಿಕಾ ಕಂಪನಿಯು 5.4 ಲಕ್ಷ ಭಾರತೀಯರೂ ಸೇರಿದಂತೆ ಫೇಸ್‌ಬುಕ್‌ನ ಸುಮಾರು 8.7 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಮಾರಾಟ ಮಾಡಿದ ಸುದ್ದಿ ಬಹಿರಂಗವಾಗಿತ್ತು. ಇದರಿಂದ ಫೇಸ್‌ಬುಕ್‌ ಟೀಕೆಗೆ ಗುರಿಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು