ಬುಧವಾರ, ಮಾರ್ಚ್ 29, 2023
32 °C

10, 12ನೇ ತರಗತಿಗಳಿಗೆ ವಿಶೇಷ ಮೌಲ್ಯಮಾಪನ ವ್ಯವಸ್ಥೆ ಪ್ರಕಟಿಸಿದ ಸಿಬಿಎಸ್‌ಇ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) 2021-2022ನೇ ಸಾಲಿನ 10 ಮತ್ತು 12ನೇ ತರಗತಿಗಳಿಗೆ ವಿಶೇಷ ಮೌಲ್ಯಮಾಪನ ವ್ಯವಸ್ಥೆಯನ್ನು ಪ್ರಕಟಿಸಿದೆ. ಎರಡೂ ತರಗತಿಗಳನ್ನು ವರ್ಷಕ್ಕೆ ಎರಡು ಅವಧಿಯಂತೆ ವಿಭಾಗಿಸಲಾಗಿದೆ. ಒಂದೇ ತರಗತಿಗೆ ಎರಡು ಅವಧಿಯಲ್ಲಿ ಮೌಲ್ಯಮಾಪನ ನಡೆಯಲಿದೆ. ಕೋವಿಡ್‌ ಸಾಂಕ್ರಾಮಿಕದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ.

ಓದಿ: 

2021-22ನೇ ಸಾಲಿನ ಪಠ್ಯಕ್ರಮದಲ್ಲೂ ಬದಲಾವಣೆ ಮಾಡಲಾಗುತ್ತದೆ. ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ಮತ್ತು ಆದ್ಯತೆ ನೀಡಲಾಗುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. ಕೋವಿಡ್‌ ಎರಡನೇ ಅಲೆಯ ಕಾರಣ 2020-21ನೇ ಸಾಲಿನ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಪಡಿಸಿತ್ತು. ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ಜುಲೈ 31ರ ಒಳಗೆ ಪ್ರಕಟಿಸಲಿದೆ. ಇದರ ಮಧ್ಯೆಯೇ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಯನ್ನು ಸಿಬಿಎಸ್‌ಇ ಅಂತಿಮಗೊಳಿಸಿದೆ.

10 ಮತ್ತು 12ನೇ ತರಗತಿಯ ಪಠ್ಯಕ್ರಮಗಳನ್ನು ವರ್ಷಕ್ಕೆ ಎರಡು ಅವಧಿಯಂತೆ ವಿಭಾಗಿಸಲಾಗಿದೆ. ಇಡೀ ವರ್ಷದ ಪಠ್ಯಕ್ರಮವನ್ನು ಒಂದು ಅವಧಿಗೆ ಶೇ 50ರಂತೆ ವಿಭಾಗಿಸಲಾಗಿದೆ. ಪ್ರತಿ ಅವಧಿಯ ಅಂತ್ಯದಲ್ಲಿ ಮೌಲ್ಯಮಾಪನ ನಡೆಯಲಿದೆ. ಆಂತರಿಕ ಮೌಲ್ಯಮಾಪನ, ಪ್ರಾಯೋಗಿಕ ಪರೀಕ್ಷೆ, ಪ್ರಾಯೋಗಿಕ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಜಾರಿಯಲ್ಲಿರುವ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಲಾಗುತ್ತದೆ ಎಂದು ಸಿಬಿಎಸ್‌ಇ ಮಾಹಿತಿ ನೀಡಿದೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು