ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಳಕೆಗೆ 10 ಲಕ್ಷ ಡೋಸ್ ಲಸಿಕೆ ಖರೀದಿಗೆ ಕೇರಳಕ್ಕೆ ಅನುಮತಿ

Last Updated 16 ಆಗಸ್ಟ್ 2021, 12:09 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಆಸ್ಪತ್ರೆಗಳಿಗೆ ಮಾಸಿಕ ನಿಗದಿಪಡಿಸಿರುವ ಶೇ 25ರ ಕೋಟಾದಲ್ಲಿ 10 ಲಕ್ಷ ಡೋಸ್‌ ಕೋವಿಶೀಲ್ಡ್‌ ಲಸಿಕೆ ಖರೀದಿಗೆ ಕೇರಳ ಸರ್ಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ.

ಕೇರಳ ಸರ್ಕಾರದ ಮಾಲೀಕತ್ವದ ಕೆಎಂಎಸ್‌ಸಿಎಲ್‌ಗೆ ಈ ಸಂಬಂಧ ಅನುಮತಿ ನೀಡಿದ್ದು, ಖಾಸಗಿ ಸೌಲಭ್ಯದಡಿ ಮಾತ್ರವೇ ಈ ಲಸಿಕೆಗಳನ್ನು ಬಳಸಬೇಕು ಎಂದು ತಿಳಿಸಿದೆ.

ಖಾಸಗಿ ಆಸ್ಪತ್ರೆಗಳ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ನೀಡಲು ಕೋವಿಶೀಲ್ಡ್‌ ಲಸಿಕೆ ಖರೀದಿಸುವ ಕುರಿತು ಕೇರಳದ ಕೆಎಂಎಸ್‌ಸಿಎಲ್‌, ಕಳೆದ ತಿಂಗಳು ಸೀರಂ ಇನ್‌ಸ್ಟಿಟ್ಯೂಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಸೀರಂನ ಸರ್ಕಾರಿ ವ್ಯವಹಾರಗಳ ನಿರ್ದೇಶಕ ಪ್ರಕಾಶ್‌ ಕುಮಾರ್‌ ಸಿಂಗ್‌ ಅವರು ಆರೋಗ್ಯ ಸಚಿವಾಲಯದ ಅನುಮೋದನೆ ಕೋರಿದ್ದರು.

ಚರ್ಚೆಯ ನಂತರ ಡೋಸ್‌ಗೆ ₹ 630ರಂತೆ ಲಸಿಕೆ ಖರೀದಿಸಲು ಹಾಗೂ ಇವುಗಳನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳ ಮೂಲಕವೇ ನೀಡಬೇಕು ಎಂಬ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT