ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ಸಂತ್ರಸ್ತರ ಜೀವ ಉಳಿಸುವವರಿಗೆ ಕೇಂದ್ರದಿಂದ ‘ಉತ್ತಮ ಆಪದ್ಬಾಂಧವ’ ಪ್ರಶಸ್ತಿ

ರಸ್ತೆ ಅಪಘಾತಗಳ ಸಂತ್ರಸ್ತರ ಜೀವ ಉಳಿಸುವವರಿಗೆ ಪ್ರೇರೇಪಿಸುವ ಉದ್ದೇಶ
Last Updated 5 ಅಕ್ಟೋಬರ್ 2021, 11:27 IST
ಅಕ್ಷರ ಗಾತ್ರ

ನವದೆಹಲಿ: ರಸ್ತೆ ಅಪಘಾತಗಳಲ್ಲಿ ತೊಂದರೆಗೆ ಒಳಗಾದವರಿಗೆ ತುರ್ತು ನೆರವು ನೀಡಲು ಸಾರ್ವಜನಿಕರನ್ನು ಪ್ರೇರೇಪಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಹೊಸ ಯೋಜನೆಗೆ ಚಾಲನೆ ನೀಡಿದೆ.

ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿ, ಅವರ ಜೀವ ಉಳಿಸುವವರಿಗೆ ಈ ಯೋಜನೆಯಡಿ ‘ಉತ್ತಮ ಆಪದ್ಬಾಂಧವ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಯೋಜನೆ ಅ. 15ರಿಂದ ಜಾರಿಗೆ ಬರಲಿದ್ದು, 2026ರ ಮಾರ್ಚ್‌ 31ರ ವರೆಗೆ ಜಾರಿಯಲ್ಲಿರುವುದು. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ಸಚಿವಾಲಯ ಈ ಸಂಬಂಧ ಪತ್ರ ಬರೆದಿದೆ.

ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ, ಅವರ ಜೀವ ಉಳಿಸುವವರಿಗೆ ₹ 5,000 ನಗದು ಬಹುಮಾನ ನೀಡಲಾಗುತ್ತದೆ.

ಈ ‘ಆಪದ್ಬಾಂಧವ’ರ ಪೈಕಿ, ಒಂದು ವರ್ಷದ ಅವಧಿಯಲ್ಲಿ ಗಮನಾರ್ಹ ಸೇವೆ ಕಾರ್ಯ ಮಾಡಿರುವ 10 ಜನರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿ ತಲಾ ₹ 1 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಈ ಪ್ರಶಸ್ತಿಗೆ ಆಯ್ಕೆಯಾಗುವವರಿಗೆ ನಗದು ಬಹುಮಾನ ನೀಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ಆರಂಭಿಕ ಅನುದಾನವಾಗಿ ತಲಾ ₹ 5 ಲಕ್ಷ ನೀಡಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT