ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಹಸ್ತಕ್ಷೇಪ: ಮಮತಾ ಆಕ್ರೋಶ

ಗಲಭೆಪೀಡಿತ ಗುಜರಾತ್ ಮಾಡಲು ಬಿಜೆಪಿ ಹುನ್ನಾರ ಆರೋಪ
Last Updated 15 ಡಿಸೆಂಬರ್ 2020, 11:52 IST
ಅಕ್ಷರ ಗಾತ್ರ

ಜಲ್‌ಪೈಗುರಿ: ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಜ್ಯದ ಐಪಿಎಸ್‌ ಅಧಿಕಾರಿಗಳಿಗೆ ಸಮನ್ಸ್ ನೀಡುವ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ನಡೆಸುತ್ತಿರುವ ಕೇಂದ್ರ ಸರ್ಕಾರವು, ಪಶ್ಚಿಮ ಬಂಗಾಳವನ್ನು ಗಲಭೆಪೀಡಿತ ಗುಜರಾತ್ ರೀತಿಯಾಗಿ ಮಾರ್ಪಡಿಸಲು ಹೊರಟಿದೆ’ ಎಂದೂ ಮಮತಾ ರ‍್ಯಾಲಿಯೊಂದರಲ್ಲಿ ಆರೋಪಿಸಿದ್ದಾರೆ.

‘ರಾಜ್ಯ ಕೇಡರ್‌ನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಕೇಂದ್ರದ ಅಧಿಕಾರಿಗಳನ್ನು ಇಲ್ಲಿಗೆ ತಂದು ನಮ್ಮನ್ನು ಹೆದರಿಸಬಹುದು ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಭಾವಿಸಿದರೆ ಅದು ಅವರ ತಪ್ಪು ಆಲೋಚನೆ’ ಎಂದು ಕಿಡಿಕಾರಿದರು.

‘ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿಲ್ಲ’ ಎಂದು ಪುನರುಚ್ಚರಿಸಿದ ಅವರು, ‘ನಡ್ಡಾ ಅವರ ಬೆಂಗಾವಲು ಪಡೆಯೊಂದಿಗೆ ಅಷ್ಟೊಂದು ಕಾರುಗಳು ಏಕೆ ಬಂದವು? ಅವರೊಂದಿಗೆ ಕ್ರಿಮಿನಲ್ ಆರೋಪ ಹೊಂದಿರುವವರು ಏಕೆ ಬಂದಿದ್ದರು?’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

‘ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’ ಎಂದೂ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT