ಲೇಹ್: ಎಲ್ಲ ಸರ್ಕಾರಿ ಉದ್ಯೋಗಗಳನ್ನು ಸ್ಥಳೀಯರಿಗೆ ಮಾತ್ರ ಮೀಸಲಿರಿಸಿ ಲಡಾಖ್ ಕೇಂದ್ರಾಡಳಿತವು ಮಹತ್ವದ ನಿರ್ಧಾರ ಪ್ರಕಟಿಸಿದೆ.

ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್ ಅವರು ಹೊಸ ನಿಯಮದ ಬಗ್ಗೆ ಮಂಗಳವಾರ ಘೋಷಣೆ ಮಾಡಿದ್ದಾರೆ.

ಸ್ಥಳೀಯರ ವ್ಯಾಪ್ತಿಯಲ್ಲಿ ಯಾರೆಲ್ಲ ಬರಲಿದ್ದಾರೆ ಎಂಬುದರ ಬಗ್ಗೆ ಮಾನದಂಡ ಇನ್ನಷ್ಟೇ ಸಿದ್ಧಪಡಿಸಬೇಕಿದೆ. ಆದರೂ ಅಧಿಸೂಚನೆ ಹೊರಡಿಸಿದ ಕೂಡಲೇ ಹೊಸ ನಿಯಮ ಜಾರಿಗೆ ಬರಲಿದೆ.

ಓದಿ:ಚೀನಾ–ಭಾರತ ಸೇನೆ ವಾಪಸ್ ಕರೆಸಿಕೊಳ್ಳುವ ಕ್ರಮದಿಂದ ಉತ್ತೇಜನಗೊಂಡಿದ್ದೇವೆ: ರಷ್ಯಾ

‘ಲಡಾಖ್‌ನ ನಿವಾಸಿಯಲ್ಲದವರನ್ನು ಸೇವೆಗೆ ಪರಿಗಣಿಸಲಾಗುವುದಿಲ್ಲ’ ಎಂದು 2021ರ ಲಡಾಖ್ ಕೇಂದ್ರಾಡಳಿತ ಪ್ರದೇಶ ಸೇವಾ ನೇಮಕಾತಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಆದಾಗ್ಯೂ, 2019ರ ಜಮ್ಮು–ಕಾಶ್ಮೀರ ಪುನರ್ ಸಂಘಟನೆ ಕಾಯ್ದೆಯ ಅಡಿ ಸೇವೆಗೆ ನೇಮಕವಾದವರಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

2011ರ ಜನಗಣತಿ ಪ್ರಕಾರ, ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳನ್ನೊಳಗೊಂಡ ಲಡಾಖ್‌ನ ಜನಸಂಖ್ಯೆ ಸುಮಾರು 2.7 ಲಕ್ಷ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ 2019ರ ಆಗಸ್ಟ್ 5ರಿಂದ ಅಸ್ತಿತ್ವಕ್ಕೆ ಬಂದಿದೆ.

ಓದಿ:ವಾಹನಗಳಿಲ್ಲದ ದಿನಗಳ ಸವಾಲು ಅರಿಯಲು ಕೇರಳದಿಂದ ಲಡಾಖ್ಗೆ ಪಾದಯಾತ್ರೆ ಹೊರಟ ಯುವಕರು

ಸ್ಥಳೀಯರಿಗೆ ಸರ್ಕಾರಿ ಉದ್ಯೋಗ ಮೀಸಲಿರಿಸುವ ಮೂಲಕ ಕೇಂದ್ರ ಸರ್ಕಾರವು ಲಡಾಖ್ ಜನತೆಯ ಪ್ರಮುಖ ಬೇಡಿಕೆ ಈಡೇರಿಸಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.