ಚೆನ್ನೈ ಪಾಲಿಕೆಗೆ ಕಿರಿಯ ವಯಸ್ಸಿನ ಮೇಯರ್: ಮೊದಲ ಬಾರಿಗೆ ದಲಿತ ಮಹಿಳೆಗೆ ಅವಕಾಶ

ಚೆನ್ನೈ: ಚೆನ್ನೈ ಪಾಲಿಕೆಗೆ ಇದೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ. ಆಡಳಿತಾರೂಢ ಡಿಎಂಕೆ ಪಕ್ಷವು 28 ವರ್ಷ ವಯಸ್ಸಿನ ಆರ್.ಪ್ರಿಯಾ ಅವರನ್ನು ಮೇಯರ್ ಸ್ಥಾನಕ್ಕೆ ಗುರುವಾರ ಹೆಸರಿಸಿದೆ.
ಶುಕ್ರವಾರ (ಮಾ.4) ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ (ಜಿಸಿಸಿ) ಮೇಯರ್ ಸ್ಥಾನಕ್ಕೆ ಪರೋಕ್ಷವಾಗಿ ಚುನಾವಣೆ ನಡೆಯಲಿದೆ. ಚೆನ್ನೈನ ಒಟ್ಟು 200 ವಾರ್ಡ್‌ಗಳ ಪೈಕಿ ಡಿಎಂಕೆ 153 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವುದರಿಂದ ಪಕ್ಷ ಸೂಚಿಸಿರುವಂತೆ ಪ್ರಿಯಾ ಅವರೇ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ.
ಎಂ.ಕಾಂ ಪದವೀಧರೆಯಾಗಿರುವ ಪ್ರಿಯಾ ಅವರು ಚೆನ್ನೈ ಕಾರ್ಪೊರೇಷನ್ ಮೇಯರ್ ಸ್ಥಾನಕ್ಕೇರಲಿರುವ ಮೂರನೇ ಮಹಿಳೆ. ಈ ಹಿಂದೆ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ಅವರು ಮೇಯರ್ ಆಗಿ ಅಧಿಕಾರ ನಿರ್ವಹಿಸಿದ್ದಾರೆ. ಡಿಎಂಕೆಯ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಪ್ರಿಯಾ. ಅವರ ತಂದೆ ಆರ್.ರಾಜನ್ ಸಹ ಡಿಎಂಕೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರಿಯಾ 74ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.