ಗುರುವಾರ , ಮೇ 13, 2021
38 °C

ಛತ್ತೀಸಗಢ: ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ಹತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ರಾಯಪುರ: ‘ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲನೊಬ್ಬ ಹತನಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ದಾಂತೇವಾಡದ ನೀಲವಾಯದ ಅರಣ್ಯದಲ್ಲಿ ಬೆಳಿಗ್ಗೆ 6 ಗಂಟೆಗೆ ನಕ್ಸಲರು ಮತ್ತು ಜಿಲ್ಲಾ  ಮೀಸಲು ಪಡೆ (ಡಿಆರ್‌ಜಿ) ಹಾಗೂ ರಾಜ್ಯ ಪೊಲೀಸ್‌ ಇಲಾಖೆಯ ನಕ್ಸಲ್‌ ನಿಗ್ರಹ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಕ್ಸಲ್‌ನೊಬ್ಬ ಮೃತಪಟ್ಟಿದ್ದಾನೆ.’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಮಾಹಿತಿ ನೀಡಿದರು.

‘ಈತನನ್ನು ಮಲ್ಲಾಪಾರ ನಿವಾಸಿ ಕೋಸಾ ಎಂದು ಗುರುತಿಸಲಾಗಿದ್ದು, ಈತನ ತಲೆಗೆ ಸರ್ಕಾರವು ₹5 ಲಕ್ಷ ಬಹುಮಾನ ಘೋಷಿಸಿತ್ತು. ಕೋಸಾ ಕಳೆದ 15 ವರ್ಷಗಳಿಂದ ಮಾವೋವಾದಿ ಸಂಘಟನೆಯೊಂದಿಗೆ ಸಕ್ರಿಯನಾಗಿದ್ದ, ಈತ ಮಲಾಗಿರಿ ಸಮಿತಿಯ ಸದಸ್ಯ’ ಎಂದು ಅವರು ಹೇಳಿದರು.

ಕೋಸಾ ವಿರುದ್ಧ 15 ಪ್ರಕರಣಗಳಿವೆ. ಎನ್‌ಕೌಂಟರ್‌ ನಡೆದ ಸ್ಥಳದಿಂದ ಎ9 ಎಂಎಂ ಪಿಸ್ತೂಲ್‌, ನಾಡ ಬಂದೂಕು, 3 ಕೆ.ಜಿ.ಸುಧಾರಿತ ಸ್ಫೋಟಕ ಸಾಧನ, ದಿನಬಳಕೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು