ನವದೆಹಲಿ: ಕೋವಿಡ್–19 ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಭಾರತದ ಎರಡು ಪ್ರಮುಖ ಕಂಪನಿಗಳ ಮಾಹಿತಿ ತಂತ್ರಜ್ಞಾನ ಮೂಲ ಸೌಭಲ್ಯಗಳನ್ನು ಚೀನಾ ಗುರಿಯಾಗಿಸಿಕೊಂಡಿದೆ ಎಂಬ ಸೈಬರ್ ಗುಪ್ತಚರ ಸಂಸ್ಥೆಯ ಆರೋಪದ ನಡುವೆ, ತಾನು ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂದಿರುವುದಾಗಿ ಚೀನಾ ಹೆಮ್ಮೆಯಿಂದ ಹೇಳಿಕೊಂಡಿದೆ.

ಚೀನಾವು ತನ್ನ ಹ್ಯಾಕರ್ಗಳ ಮೂಲಕ ಬೇರೆ ಬೇರೆ ದೇಶಗಳ ಲಸಿಕೆ ಸೂತ್ರದ ಮಾಹಿತಿಯನ್ನು ಕದಿಯುತ್ತಿದೆ. ಈ ಮೂಲಕ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತಾನೇ ಮುಂದಿದ್ದೇನೆ ಎಂದು ತೋರಿಸಿಕೊಳ್ಳಲು ಯತ್ನಿಸುತ್ತದೆ ಎಂಬ ಆರೋಪವನ್ನು ನವದೆಹಲಿಯ ಚೀನಾ ರಾಯಭಾರ ಕಚೇರಿಯು ತಳ್ಳಿಹಾಕಿದೆ.

ನಮಗೆ ಲಸಿಕೆ ಮಾಹಿತಿಯನ್ನು ಕದಿಯುವ ಅವಶ್ಯಕತೆ ಇಲ್ಲ. ಚೀನಾವು ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲೇ ಇದೆ. ಅದಕ್ಕಾಗಿ ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಹೇಳಿದೆ.

ಲಸಿಕೆಗೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತ ಅಂತರರಾಷ್ಟ್ರೀಯಮಟ್ಟದಲ್ಲಿ ಪರಸ್ಪರ ಕೊಡುಗೆ ನೀಡುತ್ತಿವೆ ಮತ್ತು ಇದೇ ವೇಳೆ ತಪ್ಪು ಮಾಹಿತಿಗಳ ಬಲಿಪಶುಗಳೂ ಆಗಿವೆ. ಇದು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಗಳಾಗಿಲ್ಲ ಎಂದು ಹೇಳಿದೆ.

'ಸ್ಟೋನ್ ಪಾಂಡಾ' ಎಂದೂ ಕರೆಯುವ ಚೀನಾದ ಹ್ಯಾಕಿಂಗ್ ಗುಂಪು ಎಪಿಟಿ 10, ಭಾರತ್ ಬಯೋಟೆಕ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (ಎಸ್ಐಐ) ಇರುವ ಐಟಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿ ಸಾಫ್ಟ್ವೇರ್ನಲ್ಲಿನ ದೋಷ ಹಾಗೂ ದೌರ್ಬಲ್ಯಗಳನ್ನು ಪತ್ತೆ ಮಾಡಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫಿರ್ಮಾ ಹೇಳಿದ್ದನ್ನು ರಾಯಿಟರ್ಸ್ ಸೋಮವಾರ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.