ಮಂಗಳವಾರ, ನವೆಂಬರ್ 30, 2021
21 °C

‘ಮುಂದಿನ ದಲೈ ಲಾಮಾ ಆಯ್ಕೆ ಮಾಡುವಲ್ಲಿ ಚೀನಾಕ್ಕೆ ಹಕ್ಕಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

ದಲೈ ಲಾಮಾ

ತವಾಂಗ್‌, ಅರುಣಾಚಲ ಪ್ರದೇಶ: ‘ಟಿಬೆಟ್‌ನ ಮುಂದಿನ ದಲೈ ಲಾಮಾ ಅವರನ್ನು ಆಯ್ಕೆ ಮಾಡುವುದಕ್ಕೆ ಚೀನಾಕ್ಕೆ ಯಾವುದೇ ಅಧಿಕಾರವಿಲ್ಲ’ ಎಂದು ಅರುಣಾಚಲ ಪ್ರದೇಶದ ತವಾಂಗ್‌ ಮಠದ ಮುಖ್ಯಸ್ಥ ಗ್ಯಾಂಗ್‌ಬಂಗ್ ರಿನ್‌ಪೋಚೆ ಹೇಳಿದ್ದಾರೆ.

ಟಿಬೆಟ್‌ನ ಲಾಸಾದಲ್ಲಿನ ಪೊಟಾಲಾ ಅರಮನೆಯ ನಂತರ ವಿಶ್ವದ ಎರಡನೇ ಅತಿದೊಡ್ಡ ಮಠದ ಮುಖ್ಯಸ್ಥರಾಗಿರುವ ರಿನ್‌ಪೋಚೆ ಅವರು, ‘ಟಿಬೆಟನ್ ಆಧ್ಯಾತ್ಮಿಕ ನಾಯಕನ ಉತ್ತರಾಧಿಕಾರಿಯ ನೇಮಕದ ಬಗ್ಗೆ ನಿರ್ಧರಿಸಲು ಪ್ರಸ್ತುತ ದಲೈ ಲಾಮಾ ಮತ್ತು ಟಿಬೆಟನ್ ಜನರಿಗೆ ಮಾತ್ರ ಹಕ್ಕಿದೆ. ಚೀನಾಕ್ಕೆ ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ’ ಎಂದು ಹೇಳಿದರು.

‘ಚೀನಾ ಸರ್ಕಾರಕ್ಕೆ ಧರ್ಮದಲ್ಲಿ ನಂಬಿಕೆ ಇಲ್ಲ. ಧರ್ಮದಲ್ಲಿ ನಂಬಿಕೆ ಇಲ್ಲದ ಸರ್ಕಾರ ಮುಂದಿನ ದಲೈ ಲಾಮಾ ಅವರನ್ನು ಹೇಗೆ ನಿರ್ಧರಿಸುತ್ತದೆ. ಉತ್ತರಾಧಿಕಾರಿಯ ನೇಮಕವು ಧರ್ಮ ಮತ್ತು ನಂಬಿಕೆಯ ವಿಷಯವಾಗಿದೆ. ಇದು ರಾಜಕೀಯ ವಿಷಯವಲ್ಲ’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಬೀಜಿಂಗ್‌ನ ವಿಸ್ತರಣಾ ನೀತಿಯನ್ನು ಎದುರಿಸುವುದು ಮುಖ್ಯವಾಗಿದೆ. ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಕಟ್ಟುನಿಟ್ಟಾದ ಜಾಗೃತಿ ಕಾಯ್ದುಕೊಳ್ಳಬೇಕು’ ಎಂದೂ ಅವರು ಭಾರತಕ್ಕೆ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು