ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಮೇಲ್ಮೈ ಮಾದರಿ ಸಂಗ್ರಹಿಸಿದ ‘ಚಾಂಗ್ ಇ–5 ಪ್ರೋಬ್' ಯಶಸ್ವಿ ಭೂಸ್ಪರ್ಶ

Last Updated 18 ಡಿಸೆಂಬರ್ 2020, 3:38 IST
ಅಕ್ಷರ ಗಾತ್ರ

ಬೀಜಿಂಗ್‌: ಕೆಲವು ದಿನಗಳ ಹಿಂದೆ ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗೂ ಮಣ್ಣಿನ ಮಾದರಿ ಹೊತ್ತು ಹೊರಟಿದ್ದ ಚೀನಾದ ಚಾಂಗ್‌ಇ–5 ಪ್ರೋಬ್‌ ಮಾನವ ರಹಿತ ಬಾಹ್ಯಾಕಾಶ ನೌಕೆ ಗುರುವಾರ ಯಶಸ್ವಿಯಾಗಿ ತನ್ನ ತವರು ನೆಲವನ್ನು ಸ್ಪರ್ಶಿಸಿತು.

40 ವರ್ಷಗಳ ಬಳಿಕೆ ಇದೇ ಮೊದಲ ಬಾರಿಗೆ ಚಂದ್ರನ ಮೇಲ್ಮೈನಿಂದ ಮಾದರಿಗಳನ್ನು ಸಂಗ್ರಹಿಸಿದ ಮೊದಲ ನೌಕೆ ಎಂಬ ಕೀರ್ತಿಗೂ ಪಾತ್ರವಾಗಿದೆ.

ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ಪ್ರಕಾರ, ಬಾಹ್ಯಾಕಾಶ ನೌಕೆ ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಸಿಜಿವಾಂಗ್ ಬ್ಯಾನರ್‌ನಲ್ಲಿ ಮುಂಜಾನೆ 1:59 ಕ್ಕೆ (ಸ್ಥಳೀಯ ಕಾಲಮಾನ) ಬಂದಿಳಿದಿದೆ. ಸಿಎನ್‌ಎಸ್‌ಎ ಮುಖ್ಯಸ್ಥ ಜಾಂಗ್ ಕೆಜಿಯಾನ್ ‘ಚಾಂಗ್ -5 ಮಿಷನ್‘ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ.

ಇದು, 2004ರಿಂದ ಆರಂಭವಾಗಿರುವ ಚಂದ್ರನ ಮೇಲಿನಿಂದ ಮಾದರಿಗಳನ್ನು ಸಂಗ್ರಹಿಸಿ ತರುವ ಮೂರು ಹಂತಗಳ ಯೋಜನೆಯಾದ ಲೂನಾರ್ ಎಕ್ಸ್‌ಪ್ಲೊರೇಷನ್ ಪ್ರೋಗ್ರಾಮ್ ಆಫ್ ಆರ್ಬಿಟಿಂಗ್ ಅಂಡ್ ಲ್ಯಾಂಡಿಂಗ್‌ನ ಯಶಸ್ಸಿನ ಸೂಚಕವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ನ.24ರಂದು ಚಾಂಗ್‌ಇ ಉಡಾವಣೆಗೊಳಿಸಲಾಗಿತ್ತು. ಡಿ.1ರಂದು ಚಂದ್ರನ ಮೇಲ್ಮೈನಲ್ಲಿ ಇಳಿದಿದ್ದ ಪ್ರೋಬ್‌, ಮಾದರಿಗಳನ್ನು ಸಂಗ್ರಹಿಸಿ ಡಿ.3ರಂದು ಚಂದ್ರನ ಮೇಲ್ಮೈಯಿಂದ ಉಡಾವಣೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT