ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಕಂಪನಿಯಿಂದ ಗಾಲಿ ಖರೀದಿಗೆ ಮುಂದಾದ ಭಾರತೀಯ ರೈಲ್ವೆ

ಯುದ್ಧದ ಕಾರಣ ಪೂರೈಕೆಗೆ ಮುಂದಾಗದ ಉಕ್ರೇನ್‌
Last Updated 20 ಜುಲೈ 2022, 19:56 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ ಯುದ್ಧಪೀಡಿತವಾಗಿರುವ ಕಾರಣ, ರೈಲ್ವೆಯು ತನ್ನ ಎಲ್‌ಎಚ್‌ಬಿ ಕೋಚ್‌ಗಳಿಗೆ ಅಗತ್ಯವಿರುವ ಗಾಲಿಗಳನ್ನು ಚೀನಾ ಮೂಲದ ಕಂಪನಿಯಿಂದ ಖರೀದಿ ಮಾಡಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ‘ಎಲ್‌ಎಚ್‌ಬಿ ಕೋಚ್‌ಗಳಿಗೆ ಅಗತ್ಯವಿರುವ 39,000 ಗಾಲಿಗಳನ್ನು ಪೂರೈಸುವ ಸಂಬಂಧ ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಈ ಟೆಂಡರ್ ಚೀನಾದ ಟೈಯುವಾನ್ ಕಂಪನಿ ಪಾಲಾಗಿದೆ’ ಎಂದು ಹೇಳಿದ್ದಾರೆ.

‘ಈ ಮೊದಲು, 30 ಸಾವಿರ ಗಾಲಿಗಳನ್ನು ಪೂರೈಸಲು ಉಕ್ರೇನ್‌ ಮೂಲದ ಕೆಎಲ್‌ಡಬ್ಲ್ಯು ಕಂಪನಿಗೆ ಆರ್ಡರ್‌ ನೀಡಲಾಗಿತ್ತು. ಆದರೆ, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ, ಗಾಲಿಗಳ ಪೂರೈಕೆ ಒಪ್ಪಂದದಿಂದ ಕೆಎಲ್‌ಡಬ್ಲ್ಯು ಹಿಂದೆ ಸರಿಯಿತು‘ ಎಂದು ಅವರು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT