ಭಾನುವಾರ, ನವೆಂಬರ್ 28, 2021
19 °C

ಯುಪಿಎಸ್‌ಸಿ: ಶೇ 52.04ರಷ್ಟು ಅಂಕ ಪಡೆದ ಶುಭಂ ಕುಮಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2020ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿರುವ ಶುಭಂ ಕುಮಾರ್‌ ಶೇ 52.04 ಅಂಕಗಳನ್ನು ಹಾಗೂ ದ್ವಿತೀಯ ಸ್ಥಾನ ಪಡೆದಿರುವ ಜಾಗೃತಿ ಅವಸ್ಥಿ ಶೇ 51.95 ಅಂಕಗಳನ್ನು ಗಳಿಸಿದ್ದಾರೆ. 

ಶುಭಂ ಕುಮಾರ್‌ ಅವರು ಲಿಖಿತ ಪರೀಕ್ಷೆಯಲ್ಲಿ 878 ಮತ್ತು ಸಂದರ್ಶನದಲ್ಲಿ 176 ಸೇರಿ ಒಟ್ಟು 1,054 ಅಂಕಗಳನ್ನು ಗಳಿಸಿದ್ದಾರೆ. ಅವಸ್ಥಿ ಅವರು ಲಿಖಿತ ಪರೀಕ್ಷೆಯಲ್ಲಿ 859 ಮತ್ತು ಸಂದರ್ಶನದಲ್ಲಿ 193 ಸೇರಿ ಒಟ್ಟು 1,052 ಅಂಕಗಳನ್ನು ಪಡೆದಿದ್ದಾರೆ.

ಮೂರನೇ ಸ್ಥಾನ ಪಡೆದ ಅಂಕಿತಾ ಜೈನ್‌ ಅವರು ಲಿಖಿತ ಪರೀಕ್ಷೆಯಲ್ಲಿ 839 ಮತ್ತು ಸಂದರ್ಶನದಲ್ಲಿ 212 ಸೇರಿ ಒಟ್ಟು 1,051 ಅಂಕಗಳನ್ನು ಗಳಿಸಿದ್ದಾರೆ. ನಾಲ್ಕನೇ ಸ್ಥಾನ ಪಡೆದ ಯಶ್‌ ಜಲುಕಾ ಲಿಖಿತ ಪರೀಕ್ಷೆಯಲ್ಲಿ 851 ಮತ್ತು ಸಂದರ್ಶನದಲ್ಲಿ 195 ಸೇರಿ ಒಟ್ಟು 1,046 ಅಂಕಗಳನ್ನು ಗಳಿಸಿದ್ದಾರೆ. 

545 ಪುರುಷರು ಮತ್ತು 216 ಮಹಿಳೆಯರು ಸೇರಿ 761 ಮಂದಿ 2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಆಯೋಗವು ತಿಳಿಸಿದೆ. 

ಒಟ್ಟು 2,025 ಅಂಕಗಳನ್ನು ಪರೀಕ್ಷೆಗೆ ನಿಗದಿಪಡಿಸಲಾಗಿರುತ್ತದೆ. ಮುಖ್ಯ ಪರೀಕ್ಷೆಯು 1,750 ಮತ್ತು ಸಂದರ್ಶನವು 275 ಅಂಕಗಳನ್ನು ಹೊಂದಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು