ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಮಸೀದಿಯಲ್ಲಿ ಹಿಂಸಾಚಾರ: 152 ಮಂದಿಗೆ ಗಾಯ

ಹಿಂಸಾಚಾರಕ್ಕೆ ಕಾರಣರಾದವರ ಸೆರೆ: ಪೊಲೀಸರ ಮಾಹಿತಿ
Last Updated 15 ಏಪ್ರಿಲ್ 2022, 12:50 IST
ಅಕ್ಷರ ಗಾತ್ರ

ಜೆರುಸಲೆಂ(ಎಪಿ): ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಶುಕ್ರವಾರ ನಸುಕಿನ ಜಾವ ಪ್ರಾರ್ಥನೆ ಸಲ್ಲಿಸಲೆಂದು ಹಳೆಯ ಜೆರುಸಲೆಂ ನಗರದಲ್ಲಿನ ಅಲ್-ಅಕ್ಸಾ ಮಸೀದಿಗೆ ಬಂದಿದ್ದ ಪ್ಯಾಲೆಸ್ಟೀನ್ ನಾಗರಿಕರು ಮತ್ತು ಇಸ್ರೇಲ್ ಪೊಲೀಸರ ಮಧ್ಯೆ ಗಲಭೆ ನಡೆದಿದ್ದು, ಕನಿಷ್ಠ 152 ಮಂದಿ ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಮತ್ತು ಯಹೂದಿಗಳಿಗೆ ಪವಿತ್ರ ಕ್ಷೇತ್ರವಾಗಿರುವ ಜೆರುಸಲೆಂನಲ್ಲಿರುವ ಅಲ್ ಅಕ್ಸಾ ಮಸೀದಿಯು ಇಸ್ರೇಲಿ-ಪ್ಯಾಲೆಸ್ಟೀನ್‌ ಪ್ರಜೆಗಳ ನಡುವಿನ ಗಲಭೆಗಳಿಗೆ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದ್ದು, ಕಳೆದ ವರ್ಷವೂ ಇಲ್ಲಿ ನಡೆದ ಘರ್ಷಣೆ ಬಳಿಕ ಗಾಜಾ ಪಟ್ಟಿಯಲ್ಲಿ ಹಮಾಸ್‌ ಉಗ್ರರ ಜತೆಗೆ 11 ದಿನಗಳ ಕಾದಾಟಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT