ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2050ರೊಳಗೆ ದಕ್ಷಿಣ ಮುಂಬೈನ ಶೇ 80ರಷ್ಟು ಪ್ರದೇಶ ಮುಳುಗಡೆ: ಬಿಎಂಸಿ ಆಯುಕ್ತ

ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಎಚ್ಚರಿಕೆ
Last Updated 28 ಆಗಸ್ಟ್ 2021, 8:42 IST
ಅಕ್ಷರ ಗಾತ್ರ

ಮುಂಬೈ: ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಕಾರಣ, 2050ರೊಳಗೆ ದಕ್ಷಿಣ ಮುಂಬೈನ ಶೇ 70 ರಿಂದ 80ರಷ್ಟು ಭಾಗ ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಆಯುಕ್ತ ಇಕ್ಬಾಲ್ ಸಿಂಗ್ ಚಹಲ್‌ ಎಚ್ಚರಿಸಿದ್ದಾರೆ.

ಮುಂಬೈ ಹವಾಮಾನ ಕ್ರಿಯಾ ಯೋಜನೆ ಮತ್ತು ಜಾಲತಾಣ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಚಹಲ್‌, ದಕ್ಷಿಣ ಮುಂಬೈನ ಪ್ರಮಖ ವ್ಯಾಪಾರ ಜಿಲ್ಲೆಯಾಗಿರುವ ನಾರಿಮನ್‌ ಪಾಯಿಂಟ್‌ ಮತ್ತು ರಾಜ್ಯ ಸಚಿವಾಲಯಗಳ ಕಚೇರಿಗಳು, ಎ, ಬಿ, ಸಿ ಮತ್ತು ಡಿ ವಾರ್ಡ್‌ಗಳು ಸೇರಿದಂತೆ ಪ್ರಮುಖ ಭಾಗಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಸಿಂಗ್‌ ಹೇಳಿದ್ದಾರೆ.

ಮುಂಬೈ ಹವಾಮಾನ ಕ್ರಿಯಾ ಯೋಜನೆ ಮತ್ತು ಅದರ ಜಾಲತಾಣವನ್ನುಮಹಾರಾಷ್ಟ್ರ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಶುಕ್ರವಾರ ಬಿಡುಗಡೆ ಮಾಡಿದರು.

‘ಪ್ರಕೃತಿ ಈಗಾಗಲೇ ಎಚ್ಚರಿಕೆ ನೀಡುತ್ತಿದ್ದರೂ, ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಮುಂಬೈನ ಪ್ರಮುಖ ಪ್ರದೇಶಗಳು ಮುಳುಗಿ ಹೋಗುತ್ತವೆ. ಇದರರ್ಥ ಕಣ್ಮರೆಯಾಗಲಿದೆ‘ ಎಂದು ಅವರು ಎಚ್ಚರಿಸಿದರು.

‘2050ನೇ ಇಸವಿ ಬಹಳ ದೂರವಿಲ್ಲ. ಈಗ ನಾವು ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳುತ್ತಿದ್ದರೆ, ಖಂಡಿತಾ 25 –30 ವರ್ಷಗಳಲ್ಲಿ ಅಪಾಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಅಪಾಯವನ್ನು ಮುಂದಿನ ಪೀಳಿಗೆಯಷ್ಟೇ ಅಲ್ಲ, ನಾವೂ ಕೂಡ ಎದುರಿಸಬೇಕಾಗುತ್ತದೆ‘ ಎಂದರು.

‘ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಕುರಿತು ಕ್ರಿಯಾ ಯೋಜನೆ ರೂಪಿಸಿರುವ ಮೊದಲ ನಗರ ಮುಂಬೈ‘ ಎಂದು ಚಹಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT