ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾಗಿ ಸುಪ್ರಿಯಾ ಶ್ರೀನೆತ್

ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಸಂವಹನ ವಿಭಾಗದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಅಧ್ಯಕ್ಷರನ್ನಾಗಿ ಸುಪ್ರಿಯಾ ಶ್ರೀನೆತ್ ಅವರನ್ನು ಸೋಮವಾರ ನೇಮಕ ಮಾಡಿದೆ.
ಸಾಮಾಜಿಕ ಮಾಧ್ಯಮ ವಿಭಾಗದ ನಿರ್ಗಮಿತ ಅಧ್ಯಕ್ಷ ರೋಹನ್ ಗುಪ್ತಾ ಅವರ ಕೊಡುಗೆಯನ್ನು ಪಕ್ಷ ಶ್ಲಾಘಿಸುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ರೋಹನ್ ಗುಪ್ತಾ ಅವರನ್ನು ಎಐಸಿಸಿ ವಕ್ತಾರರನ್ನಾಗಿ ನೇಮಿಸಲಾಗಿದೆ ಎಂದು ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉದಯಪುರದ ಚಿಂತನ ಶಿಬಿರದಲ್ಲಿ ಜನರೊಂದಿಗೆ ಪಕ್ಷದ ಸಂಪರ್ಕ ಸುಧಾರಿಸಲು ತನ್ನ ಸಂವಹನ ವಿಭಾಗ ಬಲಪಡಿಸಲು ಕಾಂಗ್ರೆಸ್ ನಿರ್ಧರಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.