ಮಂಗಳವಾರ, ಮಾರ್ಚ್ 28, 2023
33 °C

ರೂಪಾಯಿ ಕುರಿತ ನಿರ್ಮಲಾ ಹೇಳಿಕೆಗೆ ವ್ಯಂಗ್ಯ: ಬೆಪ್ಪುತಕ್ಕಡಿ ಎಂದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ’ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಾತಿಗೆ ಕರ್ನಾಟಕ ಕಾಂಗ್ರೆಸ್‌ ಸೋಮವಾರ ವ್ಯಂಗ್ಯವಾಡಿದ್ದು, ಬೆಪ್ಪುತಕ್ಕಡಿ ಎಂದು ಮೂದಲಿಸಿದೆ.

ಭಾನುವಾರ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿರ್ಮಲಾ ಅವರು, ‘ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್‌ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್‌ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ’ ಎಂದು ಹೇಳಿದ್ದರು.

ಈ ವಿಚಾರ ಈಗಾಗಲೇ ಭಾರೀ ಟೀಕೆಗೆ ಗುರಿಯಾಗಿದೆ. ಜತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ನಿರ್ಮಲಾ ಅವರನ್ನು ಟೀಕಿಸಿದೆ.

‘ಭಾರತದ ಅರ್ಥ ವ್ಯವಸ್ಥೆ ಇಂತವರ ಕೈಗೆ ಸಿಕ್ಕು ನರಳುತ್ತಿರುವುದು 'ಆಕ್ಟ್ ಆಫ್ ಗಾಡ್' ಇರಬಹುದೇನೋ ಅಲ್ಲವೇ ನಿರ್ಮಲಾ ಸೀತಾರಾಮನ್‌ ಅವರೇ‌? ಇಂತಹ ಬೆಪ್ಪುತಕ್ಕಡಿಗಳನ್ನು ಹೊಂದಿರುವ ಬಿಜೆಪಿ ಇತರರ ಬಗ್ಗೆ ಟೀಕಿಸುವುದು ಕಾಗೆಯು ನವಿಲನ್ನು ಟೀಕಿಸಿದಂತೆಯೇ ಸರಿ’ ಎಂದು ಹೇಳಿದೆ.

ನಿರ್ಮಲಾ ಅವರು ಹಿಂದೊಮ್ಮೆ ಭಾರತದ ಆರ್ಥಿಕತೆ ಸಂಬಂಧಿಸಿದಂತೆ ಮಾತನಾಡುತ್ತ ಕೋವಿಡ್‌ ಅನ್ನು ‘ಆ್ಯಕ್ಟ್‌ ಆಫ್‌ ಗಾಡ್‌’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು