ನವದೆಹಲಿ: ‘ರಾಷ್ಟ್ರಪಿತ ಬದುಕಿಲ್ಲ ಎಂಬುದು ಹಿಂದೂತ್ವವಾದಿಗಳ ನಂಬಿಕೆ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಮಹಾತ್ಮ ಗಾಂಧಿ ಜೀವಂತವಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಅಭಿಪ್ರಾಯಪಟ್ಟರು.

‘ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಟ್ಟು ಕೊಂದ. ಆದರೆ, ಎಲ್ಲಿ ಸತ್ಯ ಇದೆಯೊ ಅಲ್ಲಿ ಬಾಪು ಜೀವಂತವಾಗಿ ಇರುತ್ತಾರೆ’ ಅವರು ಟ್ವೀಟ್ ಮಾಡಿದ್ದಾರೆ. ರಾಜಘಾಟ್ನಲ್ಲಿ ಅವರು ಪುಷ್ಪನಮನ ಸಲ್ಲಿಸಿದರು.

‘ನನ್ನ ಸಾವಿನ ನಂತರವೂ, ಪ್ರೀತಿ ಮತ್ತು ಸತ್ಯಕ್ಕೆ ಎಲ್ಲಿ ಜಯ ಇರುತ್ತದೆಯೊ ಆಗೆಲ್ಲಾ ಇತಿಹಾಸ ನನ್ನನ್ನು ಸ್ಮರಿಸುತ್ತದೆ’ ಎಂಬ ಗಾಂಧೀಜಿ ಅವರ ಹೇಳಿಕೆಯನ್ನು ಅವರು ಟ್ವೀಟ್ ಜೊತೆಗೆ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಗಾಂಧೀಜಿ ಅವರ ವ್ಯಕ್ತಿತ್ವ, ಸೇವೆಯನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.