ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ ರೈತರಿಗಲ್ಲ, ಕೋಟ್ಯಾಧೀಶರಿಗೆ ಮಾತ್ರ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

Last Updated 8 ಜನವರಿ 2023, 13:00 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ, ಹಣದುಬ್ಬರದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿತ್ತು. ಆದರೆ, ರೈತರ ಆದಾಯ ಮತ್ತಷ್ಟು ಕುಸಿದಿದೆ. ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆಯುವುದು ಇರಲಿ, ಹಣದುಬ್ಬರದಿಂದ ತತ್ತರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ರಾಹುಲ್‌, 'ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ, ಬದಲಾಗಿ ಕುಸಿದುಹೋಗಿದೆ. ರೈತರಿಗೆ ಸಿಕ್ಕಿದ್ದು ಹಣದುಬ್ಬರ, ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆಯಲ್ಲ. ಸಾಲಮನ್ನಾ ಆಗುವುದು ರೈತರದ್ದಲ್ಲ, ಶತಕೋಟ್ಯಾಧೀಶರದ್ದು ಮಾತ್ರ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕ ವಿರೋಧಿ ಕಾನೂನುಗಳು ಮತ್ತು ರಫ್ತು ನಿಮಯಗಳನ್ನು ಅಸ್ತ್ರವನ್ನಾಗಿಸಿ ರೈತರ ಮೇಲೆ ಸಂಪೂರ್ಣ ದಾಳಿ ಮಾಡಿದ್ದಾರೆ' ಎಂದು ಗುಡುಗಿರುವ ರಾಹುಲ್‌, 'ರೈತರನ್ನು ಹಿಂದೆ ಬಿಟ್ಟು, ದೇಶವು ಮುನ್ನಡೆಯಲು ಸಾಧ್ಯವಿಲ್ಲ' ಎಂದು ಕಿವಿ ಹಿಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT