ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಸೋನಿಯಾ, ಪ್ರಿಯಾಂಕಾ, ಖರ್ಗೆ ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯುತ್ತಿದ್ದು, ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯ ದರ್ಶಿ ಪ್ರಿಯಾಂಕಾ ಗಾಂಧಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತದಾನ ಮಾಡಿದರು.
ಬೆಳಿಗ್ಗೆ 10:30ರ ಸುಮಾರಿಗೆ ಆಗಮಿಸಿದ ಸೋನಿಯಾ ಮತ್ತು ಪ್ರಿಯಾಂಕಾ ತಮ್ಮ ಅಧಿಕಾರ ಚಲಾಯಿಸಿದರು.
#WATCH | Congress interim president Sonia Gandhi & party leader Priyanka Gandhi Vadra cast their vote to elect the new party president, at the AICC office in Delhi pic.twitter.com/aErRUpRVv0
— ANI (@ANI) October 17, 2022
ಸಂಸದರಾದ ಪಿ. ಚಿದಂಬರಂ, ಜೈರಾಂ ರಮೇಶ್ ಮತ್ತು ಇತರ ನಾಯಕರು ಎಐಸಿಸಿ ಕಚೇರಿಯಲ್ಲಿ ಮತದಾನ ಮಾಡಿದರು.
Karnataka | Congress presidential election candidate Mallikarjun Kharge casts his vote in Bengaluru pic.twitter.com/bfIsEGfVPp
— ANI (@ANI) October 17, 2022
ಬೆಂಗಳೂರಿನ ಮತಕೇಂದ್ರದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಮತದಾನ ಮಾಡಿದ್ದು, ಇಲ್ಲಿ 490 ಅಭ್ಯರ್ಥಿಗಳು ಮತದಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇವೇಳೆ, ಮತದಾನ ಮಾಡುವ ವಿಧಾನವನ್ನೂ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಮತದಾನ ಪ್ರಕ್ರಿಯೆ
–ಮತಪತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ಇರುತ್ತದೆ.
- ನೀವು ಮತ ಹಾಕಲು ಬಯಸುವ ಅಭ್ಯರ್ಥಿಯ ಹೆಸರಿನ ಮುಂದೆ ☑️ ಟಿಕ್ ಮಾರ್ಕ್ ಮಾಡಿ.
- ಬೇರೆ ಯಾವುದೇ ಗುರುತು ಅಥವಾ ಸಂಖ್ಯೆಯನ್ನು ಬರೆದರೆ ಮತದಾನವನ್ನು ಪರಿಗಣಿಸಲಾಗುವುದಿಲ್ಲ.
ಅತಿ ಮುಖ್ಯ ಮಾಹಿತಿ
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಮತದಾನ ಪ್ರಕ್ರಿಯೆ
ಮತಪತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ಹೆಸರು ಇರುತ್ತದೆ.- ನೀವು ಮತ ಹಾಕಲು ಬಯಸುವ ಅಭ್ಯರ್ಥಿಯ ಹೆಸರಿನ ಮುಂದೆ ☑️ ಟಿಕ್ ಮಾರ್ಕ್ ಮಾಡಿ.
- ಬೇರೆ ಯಾವುದೇ ಗುರುತು ಅಥವಾ ಸಂಖ್ಯೆಯನ್ನು ಬರೆದರೆ ಮತದಾನವನ್ನು ಪರಿಗಣಿಸಲಾಗುವುದಿಲ್ಲ. pic.twitter.com/16rRfIEMHD— DK Shivakumar (@DKShivakumar) October 16, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.