ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಗೆ ಭೂಮಿಯನ್ನು ಕಾಣಿಕೆ ಕೊಟ್ಟಿದ್ದು ನೆಹರೂ: ಬಿಜೆಪಿ ತಿರುಗೇಟು

Last Updated 12 ಫೆಬ್ರುವರಿ 2021, 9:00 IST
ಅಕ್ಷರ ಗಾತ್ರ

ನವದೆಹಲಿ: ‘ಸುಮಾರು 38,000 ಚದರ ಕಿಲೋ ಮೀಟರ್‌ ಭಾರತದ ಪ್ರದೇಶವನ್ನು ಚೀನಾಗೆ ಕಾಣಿಕೆಯಾಗಿ ನೀಡಿದ ಜವಾಹರಲಾಲ್‌ ನೆಹರೂ ಅವರು ಹಿಮಾಲಯನ್‌ ಬ್ಲಂಡರ್‌ ಮಾಡಿದ್ದರು. ಕಾಂಗ್ರೆಸ್‌ಗೆ ವಾಸ್ತವ ಸ್ಥಿತಿಯ ಅರಿವು ಈಗ ಆಗಿದೆ’ ಎಂದು ಬಿಜೆಪಿ ಟೀಕಿಸಿದೆ.

ಭಾರತದ ಪ್ರದೇಶವನ್ನು ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಬಿಟ್ಟುಕೊಟ್ಟಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಪ್ರತಿದಾಳಿ ನಡೆಸಿ ಈ ಪ್ರತಿಕ್ರಿಯೆ ನೀಡಿದೆ.

‘ಕಾಂಗ್ರೆಸ್‌ಗೆ ಕೊನೆಗೂ ವಾಸ್ತವ ಸ್ಥಿತಿಯ ಅರಿವು ಆಗಿರುವುದು ಸಂತೋಷದ ವಿಚಾರ. ಚೀನಾಗೆ 38,000 ಚದರ ಕಿಲೋ ಮೀಟರ್‌ ಭೂಮಿ ನೀಡಿದ್ದು ಜವಾಹರಲಾಲ್‌ ನೆಹರೂ ಅವರು. ಇಂತಹ ದೊಡ್ಡ ಪ್ರಮಾದ ಮಾಡಿದ ಅರಿವು ಈಗ ಕಾಂಗ್ರೆಸ್‌ ಆಗಿದೆ. ಇಂತಹ ಪ್ರಮಾದಕ್ಕಾಗಿ ಹೇಡಿ ರಾಹುಲ್‌ ಗಾಂಧಿ ಅವರನ್ನು ಕಾಂಗ್ರೆಸ್‌ ಪ್ರಶ್ನಿಸಲಿದೆಯೇ? ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ರಾಹುಲ್‌ ಗಾಂಧಿ ಮಾಡಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT