ಶಿಲ್ಲಾಂಗ್: ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಪಕ್ಷದ ಐವರು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಪಾಲ ಭಾನುವಾರ ತಿಳಿಸಿದ್ದಾರೆ.

ಝಾನಿಕಾ ಸಿಯಾಂಗ್ಷಿ (ಖಿಲಿಹ್ರಿಯಾತ್), ಅರ್ಬಿಯಾಂಗ್‌ಕಮ್ ಖರ್ ಸೋಹ್ಮತ್ (ಅಮ್ಲಾರೆಮ್), ಚಿರೆಂಗ್ ಪೀಟರ್ ಆರ್. ಮಾರಕ್ (ಖಾರ್‌ಕುತ್ತಾ), ಡಾ. ತ್ವೀಲ್ ಕೆ. ಮಾರಕ್ (ರೆಸುಬೆಲ್‌ಪಾರ) ಮತ್ತು ಕಾರ್ಲಾ ಆರ್. ಸಂಗ್ಮಾ (ರಾಜಾಬಾಲ) ಪಟ್ಟಿಯಲ್ಲಿರುವ ಐವರು.

60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಸ್ಪರ್ಧಿಸುವ 55 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಜನವರಿ 25ರಂದೇ ಪ್ರಕಟಿಸಿತ್ತು.

ಮೇಘಾಲಯ ವಿಧಾನಸಭೆಗೆ ಫೆಬ್ರುವರಿ 27ರಂದು ಚುನಾವಣೆ ನಿಗದಿಯಾಗಿದೆ. ಫೆಬ್ರವರಿ 7ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.