ಅದಾನಿ ಸಮೂಹದ ವಿರುದ್ಧದ ಹಣಕಾಸು ಅಕ್ರಮ: ಸಮಗ್ರ ತನಿಖೆಗೆ ಕಾಂಗ್ರೆಸ್ ಆಗ್ರಹ
ನವದೆಹಲಿ: ಅದಾನಿ ಸಮೂಹದ ವಿರುದ್ಧದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ಸೆಬಿ ಹಾಗೂ ಆರ್‌ಬಿಐ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಶುಕ್ರವಾರ ಆಗ್ರಹಿಸಿದೆ.
‘ಅದಾನಿ ಸಮೂಹದ ವಹಿವಾಟುಗಳ ಕುರಿತು ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ವಿಶ್ಲೇಷಣೆ ನಡೆಸಿ, ವರದಿ ಸಿದ್ಧಪಡಿಸಿದೆ. ದೇಶದ ವಿತ್ತೀಯ ವ್ಯವಸ್ಥೆಯ ಸ್ಥಿರತೆ ಹಾಗೂ ಸುರಕ್ಷತೆ ಕಾಪಾಡುವ ಹೊಣೆ ಸೆಬಿ ಹಾಗೂ ಆರ್‌ಬಿಐ ಮೇಲಿದೆ. ಹೀಗಾಗಿ ಈ ವರದಿಯಲ್ಲಿನ ಅಂಶಗಳ ಕುರಿತು ತನಿಖೆ ಅಗತ್ಯ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.