ಬಿಜೆಪಿ ಸೋಲಿಸಲು ಆರ್‌ಎಸ್‌ಎಸ್‌ನಂತೆ ನಿರಂತರ ದುಡಿಮೆ ಅಗತ್ಯ: ಕಾರಟ್

ಕೋಲ್ಕತ್ತ: ಬಿಜೆಪಿಯನ್ನು ಸೋಲಿಸಲು ಎಡಪಕ್ಷಗಳು ಆರ್‌ಎಸ್‌ಎಸ್‌ನಂತೆ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯ ಪ್ರಕಾಶ್ ಕಾರಟ್ ಮಂಗಳವಾರ ಹೇಳಿದರು.
ಪಕ್ಷದ ಮುಖವಾಣಿ ‘ಗಣಶಕ್ತಿ’ಯ 57ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೆ ಸಾಕು ಬಿಜೆಪಿಯನ್ನು ಮಣಿಸಬಹುದು ಎಂದು ಅನೇಕ ಪಕ್ಷಗಳ ಚಿಂತನೆಯಾಗಿದೆ. ಇಂತಹ ಮೈತ್ರಿಗಳು ಚುನಾವಣೆ ದೃಷ್ಟಿಯಿಂದ ಅಗತ್ಯ. ಆದರೆ, ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಸೈದ್ಧಾಂತಿಕ ಹಾಗೂ ರಾಜಕೀಯ ಹೋರಾಟ ಇಲ್ಲದಿದ್ದರೆ ಇಂತಹ ಯಾವ ಪ್ರಯತ್ನಗಳೂ ಫಲ ನೀಡುವುದಿಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.