ಶನಿವಾರ, ಅಕ್ಟೋಬರ್ 1, 2022
20 °C
18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್

ಮುನ್ನೆಚ್ಚರಿಕೆ ಡೋಸ್‌ ಆಗಿ ಕೋರ್ಬೆವ್ಯಾಕ್ಸ್‌ಗೆ ಕೇಂದ್ರ ಅನುಮೋದನೆ 

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 18 ವರ್ಷ ಮೇಲ್ಪಟ್ಟವರ ಪೈಕಿ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದುಕೊಂಡಿರುವವರಿಗೆ ಮುನ್ನೆಚ್ಚರಿಕೆ ಡೋಸ್‌ ಆಗಿ ಕೋರ್ಬೆವ್ಯಾಕ್ಸ್‌ ನೀಡಲು ಕೇಂದ್ರ ಅನುಮೋದನೆ ನೀಡಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಕೋವಿಡ್ ವಿರುದ್ಧದ ಪ್ರಾಥಮಿಕ ಲಸಿಕೆಗಿಂತ ವಿಭಿನ್ನವಾದ ಬೂಸ್ಟರ್ ಡೋಸ್ ಅನ್ನು ದೇಶದಲ್ಲಿ ಮೊದಲ ಬಾರಿಗೆ ಅನುಮತಿಸಲಾಗಿದೆ.

ಕೋವಿಡ್‌ 19 ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (ಎನ್‌ಟಿಎಜಿಐ) ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ಆಗಿ ನೀಡಲು ಶಿಫಾರಸು ಮಾಡಿತ್ತು. ಇದರ ಆಧಾರದಲ್ಲಿ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ ಎಂದು ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

’18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್‌ ಲಸಿಕೆಗಳ ಎರಡನೇ ಡೋಸ್  ಪಡೆದ ದಿನಾಂಕದಿಂದ ಆರು ತಿಂಗಳು ಅಥವಾ 26 ವಾರಗಳ ನಂತರ ಕೋರ್ಬೆವ್ಯಾಕ್ಸ್‌ ಅನ್ನು ಮುನ್ನೆಚ್ಚರಿಕೆ ಡೋಸ್ ಎಂದು ಪರಿಗಣಿಸಲಾಗುತ್ತದೆ’  ಎಂದು ಮೂಲಗಳು ತಿಳಿಸಿವೆ.‌

ಕೋವಿನ್ ಪೋರ್ಟಲ್‌ನಲ್ಲಿ ಕೋರ್ಬೆವ್ಯಾಕ್ಸ್‌ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್‌ ಸಂಬಂಧಿಸಿದಂತೆ ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ಕೋರ್ಬೆವ್ಯಾಕ್ಸ್‌ ಲಸಿಕೆಯನ್ನು ಸ್ಥಳೀಯವಾಗಿ ಬಯಾಲಾಜಿಕಲ್‌ ಇ ಕಂಪನಿಯ ವತಿಯಿಂದ ಅಭಿವೃದ್ಧಿಪಡಿಸಲಾಗಿದ್ದು, ಕೋವಿಡ್ 19 ರೋಗ ನಿರೋಧಕ ಕಾರ್ಯಕ್ರಮದಡಿ ಸದ್ಯ 12 ರಿಂದ 14 ವರ್ಷದವರಿಗೆ ಇದನ್ನು ನೀಡಲಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು