ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್‌ ಪ್ರಯೋಗಾಲಯದಲ್ಲೇ ಕೊರೊನಾ ವೈರಸ್‌ ಸೃಷ್ಟಿ: ವಿಜ್ಞಾನಿಗಳ ಪ್ರತಿಪಾದನೆ

Last Updated 30 ಮೇ 2021, 21:00 IST
ಅಕ್ಷರ ಗಾತ್ರ

ನವದೆಹಲಿ: ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗುವ ಸಾರ್ಸ್‌–ಕೋವ್‌–2 ವೈರಾಣು ಅನ್ನು ಚೀನಾದ ವಿಜ್ಞಾನಿಗಳೇ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ್ದರು ಎಂದು ಯುರೋಪ್‌ನ ಇಬ್ಬರು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.

22 ಪುಟಗಳ ಸಂಶೋಧನಾ ಪ್ರಬಂಧದಲ್ಲಿ ಬ್ರಿಟನ್‌ ಪ್ರಾಧ್ಯಾಪಕ ಅಂಗಸ್‌ ಡಲ್ಗಲಿಷ್‌ ಮತ್ತು ನಾರ್ವೆ ವಿಜ್ಞಾನಿ ಬರ್ಗರ್‌ ಸೊರೆನ್‌ಸೆನ್‌ ಅವರು ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.

ಕೋವಿಡ್‌–19 ಮಾದರಿಗಳಲ್ಲಿ ‘ವಿಭಿನ್ನ ಬೆರಳಚ್ಚುಗಳು’ ಪತ್ತೆಯಾಗಿವೆ. ಪ್ರಯೋಗಾಲಯದಲ್ಲಿ ತಿರುಚಿದರೆ ಮಾತ್ರ ಈ ರೀತಿಯ ಮಾದರಿಗಳು ದೊರೆಯಲು ಸಾಧ್ಯ ಎಂದು ಬ್ರಿಟನ್‌ನ ದಿನಪತ್ರಿಕೆ ‘ಡೇಲಿ ಮೇಲ್‌’ ಸಂಶೋಧನಾ ಪ್ರಬಂಧದ ಆಧಾರದ ಮೇಲೆ ವಿಶೇಷ ವರದಿ ಮಾಡಿದೆ.

ಚೀನಾದ ಪ್ರಯೋಗಾಲಯಗಳಲ್ಲಿನ ಮಾಹಿತಿಯನ್ನು ಉದ್ದೇಶ ಪೂರ್ವಕವಾಗಿ ಮರೆಮಾಚುವ ಅಥವಾ ನಾಶಪಡಿಸುವ ಪ್ರಯತ್ನ ಮಾಡಲಾಗಿದೆ. ಇಂತಹ ಚಟುವಟಿಕೆಗಳ ಬಗ್ಗೆ ಮಾತನಾಡಿದ ವಿಜ್ಞಾನಿಗಳು ಅಪಾಯ ಸ್ಥಿತಿ ಎದುರಿಸುತ್ತಿದ್ದಾರೆ. ವಿಜ್ಞಾನಿಗಳು ಮೌನವಾಗಿರಬೇಕು ಅಥವಾ ಅವರನ್ನು ಇಲ್ಲದಂತೆ ಮಾಡಲಾಗುತ್ತದೆ ಎಂದು ದೂರಲಾಗಿದೆ.

ವುಹಾನ್‌ ಪ್ರಯೋಗಾಲಯದಲ್ಲಿ ಕೋವಿಡ್‌–19 ವೈರಸ್‌ ಸೃಷ್ಟಿಸಲಾಗಿತ್ತು. ನೈಸರ್ಗಿಕವಾದ ವೈರಸ್‌ ಅನ್ನು ಅತಿ ಹೆಚ್ಚು ಸೋಂಕು ಹರಡುವಂತೆ ಮಾಡುವ ಯೋಜನೆ ಸಂದರ್ಭದಲ್ಲಿ ಈ ವೈರಸ್‌ ಸೃಷ್ಟಿಸಲಾಗಿದೆ ಎಂದು ವಿಜ್ಞಾನಿಗಳಾದ ಡಲ್ಗಲಿಷ್‌ ಮತ್ತು ಬರ್ಗರ್‌ ಸೊರೆನ್‌ಸೆನ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಪ್ರಕಟಿಸದ ಕಾರಣ ಸಂಶೋಧನಾ ಪ್ರಬಂಧ ಸಾರ್ವಜನಿಕವಾಗಿ ಲಭ್ಯವಾಗಿಲ್ಲ.

ಸಾರ್ಸ್‌–ಕೋವ್‌–2 ವೈರಸ್‌ ನೈಸರ್ಗಿಕವಾಗಿ ಹುಟ್ಟಿಕೊಂಡ ಸೂಕ್ಷ್ಮ ವೈರಾಣು ಎಂದು ಚೀನಾದ ವಿಜ್ಞಾನಿಗಳು ಪ‍್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT