ಮಂಗಳವಾರ, ಅಕ್ಟೋಬರ್ 20, 2020
25 °C

ಮಲ್ಯ ವಿರುದ್ಧದ ತನಿಖೆಗೆ ಸಹಕರಿಸಲು ಅಮೆರಿಕಕ್ಕೆ ಸಿಬಿಐ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ವಿರುದ್ಧದ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಸಹಕಾರ ನೀಡುವಂತೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಅಮೆರಿಕಕ್ಕೆ ಲಿಖಿತ ಮನವಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ ನೆರವು ಕೋರಿ ಅಮೆರಿಕಕ್ಕೆ ಮನವಿ ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಯೇಂದ್ರ ಸಿ. ಜಗದೇಲ್ ಅವರು ಸೋಮವಾರ ಸಹಕಾರ ನೀಡುವಂತೆ ಮನವಿ ಪತ್ರ ನೀಡಿದ್ದಾರೆ. 

‘ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಕೆಲವು ಸಾಕ್ಷ್ಯಗಳನ್ನು ಕಲೆ ಹಾಕುವುದು ಅವಶ್ಯಕವಾಗಿದೆ. ಹಾಗೂ ಈಗಾಗಲೇ ಅಮೆರಿಕದಿಂದ ಪಡೆದಿರುವ ಪುರಾವೆಗಳ ಬಳಕೆಗೆ ಅಟಾರ್ನಿ ಜನರಲ್‌ ಅವರ ಅನುಮತಿ ಅಗತ್ಯವಿದೆ’ ಎಂದು ಕೇಂದ್ರ ತನಿಖಾ ದಳ ಹೇಳಿದೆ.

ಮಲ್ಯ ಮತ್ತು ಅವರ ಮಾಲೀಕತ್ವದ ಕಿಂಗ್‌ಫಿಶರ್‌ ಅಮೆರಿಕದ ಬ್ಯಾಂಕ್‌ಗಳಿಂದ ಸಾಲ ಪಡೆದು ಹಣ ದುರುಪಯೋಗ ಪಡೆಸಿಕೊಂಡಿರುವ ಬಗ್ಗೆ ತನಿಖೆ ನಡೆಸಲು ಸಿಬಿಐ ಈ ಮನವಿ ಸಲ್ಲಿಸಿತ್ತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು