ನವದೆಹಲಿ: ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್‌ಗಳ ದಾಸ್ತಾನು ಮತ್ತು ಕಾಳಸಂತೆ ಮಾರಾಟ ಆರೋಪದ ಮೇಲೆ ಬಂಧಿಸಿದ್ದ ಉದ್ಯಮಿ ನವನೀತ್ ಕಾರ್ಲಾ ಅವರನ್ನು ವಿಚಾರಣೆಗೆ ಇನ್ನು ಐದು ದಿನ ತಮ್ಮ ವಶಕ್ಕೆ ನೀಡಬೇಕು ಎಂಬ ದೆಹಲಿ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪೊಲೀಸರು ಇತ್ತೀಚೆಗೆ ಕಾರ್ಲಾ ಮಾಲೀಕತ್ವದ ಖಾನ್ ಚಾಚಾ, ಟೌನ್ ಹೌಲ್ ಮತ್ತು ನೆಗೆ & ಜು ರೆಸ್ಟೊರಂಟ್ ಮೇಲೆ ದಾಳಿ ನಡೆಸಿ 524 ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ನಂತರ ಅವರನ್ನು ಬಂಧಿಸಲಾಗಿತ್ತು.

‘ನಮ್ಮ ಪ್ರಕಾರ ಪೊಲೀಸರ ವಶಕ್ಕೆ ಒಪ್ಪಿಸುವ ಅಗತ್ಯವಿಲ್ಲ. ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಸುಂಧರಾ ಅಜಾದ್ ತಿಳಿಸಿದರು. ಕೋರ್ಟ್ ಹೀಗೇ ಪೊಲೀಸರ ಮನವಿ ತಿರಸ್ಕರಿಸುತ್ತಿರುವುದು ಇದು ಎರಡನೇ ಬಾರಿ. ಹಿಂದೆ ಮೇ 14ರಂದು ಅರ್ಜಿ ತಿರಸ್ಕರಿಸಲಾಗಿತ್ತು.

ವಿಚಾರಣೆ ವೇಳೆ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ ಅವರು, ಮೊಬೈಲ್ ಡಾಟಾ, ಬ್ಯಾಂಕ್ ವಿವರಗಳು, ಕೆಲವರ ಜೊತೆಗಿನ ಸಂಪರ್ಕ ಕುರಿತು ವಿಚಾರಣೆ ನಡೆಸಬೇಕಿದೆ. ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದರು. ‘ನಾನು ಉತ್ಪಾದಕನಲ್ಲ, ಜನರಿಗೆ ನೆರವಾಗಲು ನಾನು ಮ್ಯಾಟ್ರಿಕ್ಸ್ ಕಂಪನಿಯಿಂದ ಯಂತ್ರಗಳನ್ನು ಪಡೆದಿದ್ದೆ. ಪೊಲೀಸರು ನನ್ನಿಂದ ಕೋವಿಡ್ ಕೇಂದ್ರಗಳಿಗೆ ನೆರವು ಪಡೆದಿದ್ದರು’ ಎಂದು ಉದ್ಯಮಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.